ಬಸ್ಸಿನಲ್ಲಿ ಅಜ್ಜಿ ಕಪಾಳಕ್ಕೆ ಹೊಡೆದ ಮಹಿಳಾ ಕಂಡಕ್ಟರ್ ; ವೀಡಿಯೊ ವೈರಲ್
ಹುಬ್ಬಳ್ಳಿ : ಶಕ್ತಿ ಯೋಜನೆ ಅವಾಂತರಗಳು ಸಧ್ಯಕ್ಕೆ ನಿಲ್ಲುವ ಲಕ್ಷಣ ಕಂಡುಬರುತ್ತಿಲ್ಲ. ಬಸ್ಸಿನಲ್ಲಿ ಗಲಾಟೆಗಳು ಸೇರಿದಂತೆ ಕಂಡಕ್ಟರ್ ಮಧ್ಯೆಯ ಜನಳಗಳು ಸಾಮಾನ್ಯವಾಗಿವೆ. ಇದರಿಂದ ಸಹ ಪ್ರಯಾಣಿಕರು ಕಿರಿಕಿರಿ ಅನುಭವಿಸುವಂತಾಗಿದೆ. ಜೊತೆಗೆ ಸಾರ್ವಜನಿಕರ ಜೊತೆ ಸಂಯಮದಿಂದ ವರ್ತನೆ ಮಾಡುವಂತೆ ಸಾರಿಗೆ ಇಲಾಖೆ ತನ್ನ ಸಿಬ್ಬಂದಿಗಳಿಗೆ ಮನವಿ ಮಾಡಿದ್ದರು ಆಗಾಗ್ಗೆ ಗಲಾಟೆ ಪ್ರಕರಣ ನಡೆಯುತ್ತಿವೆ.
ಶಕ್ತಿ ಯೋಜನೆ ನಂತರ ನಡೆದ ಗಲಾಟೆಗಳು ಸಾಕಷ್ಟು ಅದೇ ರೀತಿಯಲ್ಲಿ ಅನಗತ್ಯ ವಿಷಯಕ್ಕೆ ಮಹಿಳಾ ಕಂಡಕ್ಟರ್ ಮತ್ತು ಅಜ್ಜಿಯೊಬ್ಬರು ಕಿತ್ತಾಡಿಕೊಂಡಿದ್ದಾರೆ. ಬಸ್ ನಲ್ಲೇ ಜಗಳ ಮಾಡಿಕೊಂಡಿದ್ದು ಹಿರಿಯ ಅಜ್ಜಿಯ ಕೆಣ್ಣೆಗೆ ಮಹಿಳಾ ಕಂಡಕ್ಟರ್ ಹೊಡೆದಿದ್ದಾರೆ. ಸಧ್ಯ ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು ಮಹಿಳಾ ಕಂಡಕ್ಟರ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಮಾತಿನ ಭರದಲ್ಲಿ ಏನಾದರು ಮಾತನಾಡಿದ್ದರು ಇರಬಹುದು. ಆದರೆ ತನ್ನ ತಾಯಿ ವಯಸ್ಸಿನ ಹಿರಿಯ ಅಜ್ಜಿಯ ಕೆಣ್ಣೆಗೆ ಹೊಡೆಯುವ ಮೂಲಕ ಕಂಡಕ್ಟರ್ ತಪ್ಪು ಮಾಡಿದ್ದಾರೆ ಎಂಬ ಮಾತು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಈ ವೀಡಿಯೊ.


