ಕುಡಚಿ : ನಿಂತಿದ್ದ ಬೈಕ್ ಗೆ ಬೆಂಕಿ ಇಟ್ಟ ಕಿರಾತಕರು ; ಮಕ್ಕಳಲ್ಲ ಇವರು******
ರಾಯಬಾಗ : ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿ ಬಾಲಕರ ಗುಂಪು ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆ ಕುಡಚಿ ಪಟ್ಟಣದಲ್ಲಿ ಅಪ್ರಾಪ್ತ ಬಾಲಕರು ಮಾಡಿದ ಕೆಲಸಕ್ಕೆ ಕುಡಚಿ ಪಟ್ಟಣ ಬೆಚ್ಚಿಬಿದ್ದಿದೆ. ವಾರ್ಡ್ ನಂ – 02, ಮರಾಠಾ ಗಲ್ಲಿಯಲ್ಲಿ ಶನಿವಾರ ರಾತ್ರಿ ನಾಲ್ಕೈದು ಅಪ್ರಾಪ್ತ ಮಕ್ಕಳು ಬೈಕ್ ಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ.
ಕುಡಚಿ ಪಟ್ಟಣದ ಪ್ರವೀಣ್ ಕುಲಕರ್ಣಿ ಎಂಬುವವರಿಗೆ ಸೇರಿದ ಬೈಕ್ ಗೆ ಮಕ್ಕಳ ಗುಂಪೊಂದು ದಾರಿಯಲ್ಲಿ ನಿಂತ ಬೈಕ್ ಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ ಮಕ್ಕಳ ವಿಕೃತಿ ದೃಷ್ಯಗಳು ಸಿಸಿಟಿಯಲ್ಲಿ ಸೇರೆಯಾಗಿದ್ದು. ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


