ಕಿತ್ತೂರಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಆಕರ್ಷಕ ಪಥಸಂಚಲನ
ಚನ್ನಮ್ಮನ ಕಿತ್ತೂರು : ವಿಜಯ ದಶಮಿ ಉತ್ಸವ ಮತ್ತು ಪಥಸಂಚಲನ ಅಂಗವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಚನ್ನಮ್ಮನ ಕಿತ್ತೂರು ಘಟಕದಿಂದ ಭಾನುವಾರ ಸಂಜೆ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪಥ ಸಂಚಲನ ಕಣ್ಮನ ಸೆಳೆಯಿತು.
ಗಣ ವೇಷಧಾರಿಗಳು ಶಿಸ್ತಿನ ಸಿಪಾಯಿಗಳಂತೆ ಘೋಷ ವಾದ್ಯಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದರೆ, ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಸಾರ್ವಜನಿಕರು ಕುತೂಹಲದಿಂದ ಸಂಚಲನ ವೀಕ್ಷಿಸಿದರು. ಸಂಚಲನ ಅಂಗವಾಗಿ ನಗರದ ಪ್ರಮುಖ ಬೀದಿಗಳನ್ನು ರಂಗೋಲಿ, ಪುಷ್ಪಗಳಿಂದ ಅಲಂಕರಿಸಲಾಗಿತ್ತು.
ಸಂಚಲನದಲ್ಲಿದ್ದ ಭಗವಾಧ್ವಜ ಹಾಗೂ ಸಂಘದ ಸಂಸ್ಥಾಪಕರಾದ ಡಾಕ್ಟರಜೀ, ಗುರೂಜಿ ಭಾವಚಿತ್ರಕ್ಕೆ ಜನರು ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಇದೇ ಮೊದಲ ಬಾರಿಗೆ ಪಟ್ಟಣದಲ್ಲಿ ಪಥ ಸಂಚಲ ನಡೆದಿದ್ದು ವಿಶೇಷವಾಗಿತ್ತು. 600ಕ್ಕೂ ಹೆಚ್ಚು ಗಣವೇಶ ಧಾರಿ ಸ್ವಯಂ ಸೇವಕರು ಪಾಲ್ಗೊಂಡಿದರು.
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಕೃಷಿ ಉತ್ಪನ್ನ ಮಾರುಕಟೆಯಿಂದ ಆರಂಭವಾದ ಪಥ ಸಂಚಲನ ಚನ್ನಮ್ಮನ ವರ್ತುಳ, ಅರಳಿಕಟ್ಟಿ ವೃತ್ತ, ಗೊಂಬಿಗುಡಿ, ನೇಕಾರ ಓಣ , ಬೆಲ್ಲದ ಓಣ , ರಾಣ ಚನ್ನಮ್ಮಾಜಿ ಕೂಟ, ಕಲ್ಲಗುಡಿ, ರಾವಳ ಓಣ , ಹಳೆ ಬಸ್ ನಿಲ್ದಾಣ, ಬಳಿಗಾರ ಓಣ ಯ ಮೂಲಕ ರಾಜಗುರು ಸಂಸ್ಥಾನ ಕಲ್ಮಠಕ್ಕೆ ಪಥ ಸಂಚಲ ಬಂದು ತಲುಪಿತು.
ನಂತರ ಏರ್ಪಡಿಸಿದ್ದ ಸಾರ್ವಜನಿಕ ಸಮಾರಂಭದಲಿಕರ್ನಾಟಕ ಉತ್ತರ ಪ್ರಾಂತ ಸಂಯೋಜಕ ದಿಲೀಪ ವೆಣಿಕರ ಮಾತನಾಡಿ, `ಬಾಲ್ಯದಲ್ಲಿಯೇ ಮಕ್ಕಳಲ್ಲಿ ದೇಶಾಭಿಮಾನ ಹಾಗೂ ಹಿಂದೂ ಧರ್ಮಾಭಿಮಾನ ಬೆಳೆಸಬೇಕು. ಆರ್.ಎಸ್.ಎಸ್. ವಿಶ್ವದಲ್ಲಿಯೇ ಬಲ್ಯಾಡ ಸಂಘವಾಗಿದೆ. ವಿದೇಶಗಳಲ್ಲಿಯೂ ಹಲವಾರು ಶಾಖೆಗಳನ್ನು ಹೊಂದಿದೆ. ಎಂದು ಹೇಳಿದರು.
ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ದೇಶದ ಗಡಿಯನ್ನು ಸೈನಿಕರು ಹೇಗೆ ಕಾಯುತ್ತಿದ್ದಾರೋ ಅದೇ ರೀತಿ ನಮ್ಮ ದೇಶವನ್ನು ಆರ್.ಎಸ್.ಎಸ್. ಸ್ವರ್ಯ ಸೇವಕರು ಕಾಯುತ್ತಿದ್ದಾರೆ. ಸನಾತನ ಧರ್ಮ, ಮಠ ಮಂದಿರ ಹಿಂದು ಸಮಾಜವನ್ನು ಉಳಿಸುವಲ್ಲಿ ಸಂಘದ ಪಾತ್ರ ಮಹತ್ವದಿದೆ ಎಂದು ಹೇಳಿದರು.
ತಾಲೂಕು ಕಾರ್ಯವಾಹ ಪ್ರಶಾಂತ ಕಲಾಲ, ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಕೆ.ಎಂ.ಎಫ್ ನಿರ್ದೇಶಕ ಬಸವರಾಜ ಪರವಣ್ಣವರ, ಮಂಡಳ ಅಧ್ಯಕ್ಷ ಶ್ರೀಕರ್ ಕುಲಕಣ ð, ಉಳವಪ್ಪ ಉಳ್ಳಾಗಡ್ಡಿ, ರಮೇಶ ಪರವಿನಾಯ್ಕರ ಗಣ ವೇಷದಲ್ಲಿ ಪಾಲ್ಗೊಂಡಿದರು.


