Select Page

Advertisement

ಸಚಿವ ಜಮೀರ್ ಜೊತೆ ಯತ್ನಾಳ್ ; ಏನು ವಿಶೇಷ

ಸಚಿವ ಜಮೀರ್ ಜೊತೆ ಯತ್ನಾಳ್ ; ಏನು ವಿಶೇಷ

ಬೆಳಗಾವಿ : ಸದಾಕಾಲವೂ ವಕ್ಫ್ ವಿಚಾರವಾಗಿ ಕಾಂಗ್ರೆಸ್ ಸರ್ಕಾರ ಹಾಗೂ ಸಚಿವ ಜಮೀರ್ ಅಹಮ್ಮದ್ ಖಾ‌ನ್ ವಿರುದ್ಧ ಕೆಂಡ ಕಾರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದು ಸುವರ್ಣಸೌಧದಲ್ಲಿ ಜಮೀರ್ ಅವರನ್ನು ಭೇಟಿಯಾಗಿದ್ದಾರೆ.

ಸಧ್ಯ ಈ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ರಾಜಕಾರಣಿಗಳು ಒಂದೇ ಎಂಬ ಮಾತನ್ನು ಅನೇಕರು ಆಡುತ್ತಿದ್ದಾರೆ. ಆದರೆ ಸಚಿವ ಜಮೀರ್ ಅವರನ್ನು ಭೇಟಿಮಾಡಲು ಏನು ಕಾರಣ ಎಂದು ಸ್ವತಃ ಯತ್ನಾಳ್ ಸ್ಪಷ್ಟಪಡಿಸಿದ್ದಾರೆ.‌

ವಸತಿ ಯೋಜನೆಗೆ ಸಂಭಂಧಿಸಿದಂತೆ ನಾನು ಜಮೀರ್ ಅವರನ್ನು ಅವರ ಸರ್ಕಾರಿ ಕಚೇರಿಯಲ್ಲಿ ಭೇಟಿ ಮಾಡಿರುವೆ. ನಾನು ಬಿರಿಯಾನಿ ತಿನ್ನಲು ಅವರ ಮನೆಗೆ ಹೋಗಿಲ್ಲ. ಕ್ಷೇತ್ರದ ಸಮಸ್ಯೆ ಕುರಿತು ಚರ್ಚಿಸಲು ಹೋಗಿದ್ದೆ ಎಂದು ಹೇಳಿಕೆ ನೀಡಿದ್ದಾರೆ.

ನಮ್ಮ ಕ್ಷೇತ್ರದಲ್ಲಿ ವಸತಿ ಯೋಜನೆ ಅಡಿಯಲ್ಲಿ ಸಾವಿರಾರು ಫಲಾನುಭವಿಗಳು ಇದ್ದು, ಅವರಿಗೆ ಮನೆಗಳನ್ನು ಮುಂಜೂರು ಮಾಡಿಸುವ ಉದ್ದೇಶದಿಂದ ಸಚಿವರ ಭೇಟಿ ಮಾಡಿರುವೆ. ಜನರ ಸಮಸ್ಯೆ ಕುರಿತು ಚರ್ಚಿಸಿರುವೆ ಎಂದು ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆ ನೀಡಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!