ಬೆಳಗಾವಿ : ನಗರದಲ್ಲಿ ಮಂಗಳವಾರ ಸುರಿದ ಧಾರಾಕಾರ ಮಳೆಗೆ ಮಹಿಳೆಯೊಬ್ಬಳು ಮೃತಪಟ್ಟಿದ್ದು ಪತಿ ಸ್ವಲ್ಪದರಲ್ಲೇ ಪಾರಾದ ಘಟನೆ ಹೊಸೂರ ಗ್ರಾಮದಲ್ಲಿ ನಡೆದಿದೆ.

ವಂಟಮೂರಿ ‌ಗ್ರಾಮದ‌ ಪರ್ವಿನ್ ಬೇಪಾರಿ (34) ಮೃತ ದುರ್ದೈವಿ. ಸ್ವಲ್ಪದರಲ್ಲೇ ಪತಿ ಶರೀಫ್ ಪಾರಾಗಿದ್ದಾನೆ.

ಕೋಳಿ ವ್ಯಾಪಾರಕ್ಕೆ ಹೊರಟಿದ್ದ ದಂಪತಿ ಮಳೆ ಬಂದ ಕಾರಣಕ್ಕೆ ಹಳೆಯದಾದ ಮನೆ ಪಕ್ಕ ನಿಂತಿದ್ದರು. ಈ ವೇಳೆ ಗೋಡೆ ಕುಸಿದಿದೆ. ಕಾಕತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.