ಶೇಕಡಾ ನೂರರಷ್ಟು ಫಲಿತಾಂಶ ಸಾಧಿಸಿದ ಜಂಬಗಿ ಪಿಯು ಕಾಲೆಜು
ಬೆಳಗಾವಿ : ರಾಜ್ಯಕ್ಕೆ 14ನೆ ಶ್ರೇಣಿಯoದಿಗೆ , ಶೇಕಡ ನೂರಕ್ಕೆ ನೂರು ಫಲಿತಾಂಶ ಸಾಧಿಸುವ ಬೆಳಗಾವಿಯ ಜಂಬಗಿ ಪಿಯು ಕಾಲೇಜು ಮಹತ್ವದ ಸಾಧನೆ ಮಾಡಿದೆ.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶ್ರೇಯಾ ಕಬಾಡಗಿ ವಿದ್ಯಾರ್ಥಿನಿ 585 ಅಂಕ ಪಡೆದು ರಾಜ್ಯಕ್ಕೆ 14ನೇ ರಾಂಕ್ ಪಡೆದಿದ್ದಾಳೆ. ಸ್ನೇಹ ಪೂಜಾರಿ -98.2 %, ಗುರುರಾಜ ಸಿಂಧೂರ -97 ಪ್ರತಿಶತ ಅಂಕ ಪಡೆಯುವ ಮೂಲಕ ಗಮನಸೆಳೆದಿದ್ದಾರೆ.
ಉಳಿದಂತೆ 20 ಕ್ಕೂ ಅಧಿಕ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 40 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದು 9 ವಿದ್ಯಾರ್ಥಿಗಳು ಪ್ರತ್ಯೇಕ ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದಾರೆ. ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಡಾ ಲಕ್ಷ್ಮಣ ಜಂಬಗಿ ಹಾಗೂ ಸಿಬ್ಬಂದಿ ವರ್ಗದವರು ಶುಭಹಾರೈಸಿದ್ದಾರೆ.