Select Page

ಚುನಾವಣಾ ಕರ್ತವ್ಯದಲ್ಲಿ ಲೋಪ : ಅಥಣಿ ತಹಶಿಲ್ದಾರ ಕರ್ತವ್ಯದಿಂದ ವಜಾ

ಚುನಾವಣಾ ಕರ್ತವ್ಯದಲ್ಲಿ ಲೋಪ : ಅಥಣಿ ತಹಶಿಲ್ದಾರ ಕರ್ತವ್ಯದಿಂದ ವಜಾ

ATHANI : ವಾಯುವ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿ, ಅಥಣಿ ತಹಶಿಲ್ದಾರ ದುಂಡಪ್ಪ ಕೋಮಾರ್ ಅವರನ್ನು ಕೆಲಸದಿಂದ ವಜಾ ಮಾಡಿ ಚುನಾವಣಾ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ.

2022 ರ ಪರಿಷತ್ ಚುನಾವಣೆ ಪೂರ್ವದಲ್ಲಿ ಪದವೀಧರ ಹಾಗೂ ಶಿಕ್ಷಕರ ಕ್ಷೆತ್ರಕ್ಕೆ ಶಿಕ್ಷಕರು ಹಾಗೂ ಪದವೀಧರು ಮತದಾರ ಪಟ್ಟಿಯಲ್ಲಿ ತಮ್ಮ‌ ಹೆಸರು ನೋಂದಾಯಿಸಲು ಸಲ್ಲಿಸಿದ್ದ ಅರ್ಜಿಗಳನ್ನು ನೀಡಿದ್ದರು ಆ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸದೆ ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ಅವರನ್ನು ತಕ್ಷಣವೇ ಜಾರಿಯಾಗುವಂತೆ ಚುನಾವಣಾ ಅಧಿಕಾರಿ ಕೆಲಸದಿಂದ ವಜಾ ಮಾಡಿದ್ದಾರೆ. ಜೊತೆಗೆ ಅಥಣಿ ತಹಶಿಲ್ದಾರ ಹುದ್ದೆಗೆ ವ್ಹಿ.ಎಮ್ಮ ಗೋಠೆಕರ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!