ಜೈನಮುನಿ ಮೃತದೇಹ ಸಾಗಿಸಿದ್ದ ಬೈಕ್ ಇದೇ ನೋಡಿ..!
ಬೆಳಗಾವಿ : ಇಡೀ ರಾಜ್ಯವೇ ಬೆಚ್ಚಿಬಿದ್ದ ಜೈನಮುನಿ ಹತ್ಯೆ ಪ್ರಕರಣದ ತನಿಖೆ ಮುಂದುವರಿದಿದ್ದು ಆರೋಪಿಗಳು ಜೈನಮುನಿಯನ್ನು ಕೊಂದು ಸಾಗಿಸಿದ್ದ ಬೈಕ್ ಸಧ್ಯ ಪೋಲಿಸ್ ವಶಕ್ಕೆ ಬಂದಿದೆ.
ಜೈನಮುನಿ ಹತ್ಯೆ ಮಾಡಿದ್ದ ಆರೋಪಿಗಳನ್ನು ಜುಲೈ 17 ರ ವರೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದ್ದು, ತನಿಖೆ ಮುಂದುವರಿದಿದೆ. ಆರೋಪಗಳು ಸ್ವಾಮೀಜಿ ಹತ್ಯೆ ನಂತರ ಡೈರಿ ಸುಟ್ಟಿದ್ದು ಅದರ ಬೂದಿ ಹಾಗೂ ಮೊಬೈಲ್ ಫೋನ್ ಎಫ್ ಎಸ್ ಎಲ್ ಗೆ ರವಾನಿಸಲು ಸಿದ್ಧತೆ ನಡೆಸಿದ್ದಾರೆ. ಹಾಗೆಯೇ ಆರೋಪಿಗಳು ಸಂಚರಿಸಿದ್ದ ಸ್ಥಳವನ್ನು ಪರಿಶೀಲನೆ ಮಾಡಿದ್ದು, ಸ್ವಾಮೀಜಿ ಮೃತದೇಹ ಸಾಗಿಸಿದ್ದ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ
ಮಾರ್ಗ ಮಧ್ಯದಲ್ಲೇ ಜೈನ ಮುನಿಗಳ ಮೃತದೇಹ ತುಂಡರಿಸಿದ ದುರುಳರು : ಜುಲೈ 5 ರ ರಾತ್ರಿ ಚಿಕ್ಕೋಡಿಯ ಹಿರೇಕೊಡಿ ನಂದಿ ಪರ್ವತಕ್ಕೆ ಬಂದ ಇಬ್ಬರು ಆರೋಪಿಗಳು ಕಾಮಕುಮಾರ ನಂದಿ ಮಹಾರಾಜರು ತಂಗಿದ್ದ ಕೊಠಡಿಗೆ ನುಗ್ಗುತ್ತಾರೆ. ಕರೆಂಟ್ ಶಾಕ್ ಕೊಟ್ಟು ಮೊದಲು ಕೊಲ್ಲಲು ಯತ್ನಿಸಿ ವಿಫಲರಾಗುತ್ತಾರೆ. ನಂತರ ಟವಲ್ ನಿಂದ ಕುತ್ತಿಗೆ ಹಿಸುಕಿ ಹತ್ಯೆ ಮಾಡಿ, ಮೃತದೇಹವನ್ನು ಗೋಣಿ ಚೀಲದಲ್ಲಿ ಕಟ್ಟಿಕೊಂಡು ಸಾಗಿಸುತ್ತಾರೆ.
ಮುನಿಗಳ ಶರೀರವನ್ನು ರಾಯಬಾಗ ತಾಲೂಕಿನ ಕಟಕಬಾವಿ ಗ್ರಾಮಕ್ಕೆ ರವಾನಿಸಲು, ಪರ್ಯಾಯ ಮಾರ್ಗ ಆಯ್ಕೆ ಮಾಡಿಕೊಳ್ಳುತ್ತಾರೆ. ನಂತರ ಮಾರ್ಗ ಮಧ್ಯೆ ಕಾಮಕುಮಾರ ನಂದಿ ಮಹಾರಾಜರ ಮೃತದೇಹವನ್ನು ತುಂಡರಿಸುವ ನಿರ್ಧಾರಕ್ಕೆ ಬರುವ ಆರೋಪಿಗಳು ಮಾರ್ಗಮಧ್ಯದ ಗುಡ್ಡಗಾಡು ಪ್ರದೇಶದಲ್ಲಿ ಸ್ವಾಮೀಜಿ ಶರೀರವನ್ನು ಒಂಬತ್ತು ತುಂಡಾಗಿ ಕತ್ತರಿಸಿ ಸಾಗಿಸುತ್ತಾರೆ.

