Select Page

Advertisement

ಅಂತು ಇಂತು ವಂದೇ ಭಾರತ ರೈಲು ಬಂತು ; ಕೊಟ್ಟ ಮಾತು ಉಳಿಸಿಕೊಂಡ ಸಂಸದ ಶೆಟ್ಟರ್…!

ಅಂತು ಇಂತು ವಂದೇ ಭಾರತ ರೈಲು ಬಂತು ; ಕೊಟ್ಟ ಮಾತು ಉಳಿಸಿಕೊಂಡ ಸಂಸದ ಶೆಟ್ಟರ್…!

ಬೆಳಗಾವಿ : ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾಗಿದ್ದ ಬೆಳಗಾವಿ – ಬೆಂಗಳೂರು ಮಧ್ಯೆ ವಂದೇ ಭಾರತ ರೈಲಿಗೆ ಕೇಂದ್ರ ಸರಕಾರ ಅನುಮೋದನೆ ನೀಡಿದ್ದು ಸಂತೋಷದ ಸಂಗತಿ ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಇವರು. ನಮ್ಮ ಬೆಳಗಾವಿ ಜನತೆಯ ಕನಸು ಸತತ ಪ್ರಯತ್ನದಿಂದ ನನಸಾಗಿಸಿದ ಸಂತೃಪ್ತ ಭಾವ ಹೊಂದಿದ್ದು, ನನ್ನ ಸಂತೋಷವನ್ನು ಇಮ್ಮಡಿಗೊಳಿಸಿದೆ. ಬೆಳಗಾವಿ ಮತ್ತು ಬೆಂಗಳೂರಿನ ನಡುವೆ ವಂದೇ‌ ಭಾರತ್ ರೈಲು ಸಂಚಾರದಿಂದ ಪ್ರಯಾಣ ಮತ್ತಷ್ಟು ಸುಗಮವಾಗುತ್ತದೆ. ಬೆಳಗಾವಿಯ ಸಮಗ್ರ ಅಭಿವೃದ್ಧಿಗೆ ಇದು ಪೂರಕವಾಗಲಿದೆ. ಆದಷ್ಟು ಬೇಗ ಸಮಯ ನಿಗದಿಗೊಳಿ ರೈಲು ಸಂಚಾರ ಪ್ರಾರಂಭಕ್ಕೆ ಕೋರುತ್ತೇನೆ ಎಂದಿದ್ದಾರೆ.

ಬೆಳಗಾವಿಯಿಂದ ರಾಜ್ಯದ ರಾಜಧಾನಿಗೆ ವಂದೇ ಭಾರತ ರೈಲು ಸಂಪರ್ಕ ಒದಗಿಸುವಂತೆ ಕೋರಿದ್ದ ಮನವಿಗೆ‌‌ ಸ್ಪಂದಿಸಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಹಾಗೂ ಕೇಂದ್ರ ರಾಜ್ಯ ಖಾತೆ ರೈಲ್ವೆ ಸಚಿವರಾದ ವಿ. ಸೋಮಣ್ಣ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!