Select Page

Advertisement

ಹಿಂಡಲಗಾ ಜೈಲಿನ ಅವಾಂತರ ಬಯಲು : ಹೊರಗಿನಿಂದ ಡ್ರಗ್ಸ್, ಮೊಬೈಲ್ ಎಸೆದ ಅನಾಮಿಕ..! Video

ಹಿಂಡಲಗಾ ಜೈಲಿನ ಅವಾಂತರ ಬಯಲು : ಹೊರಗಿನಿಂದ ಡ್ರಗ್ಸ್, ಮೊಬೈಲ್ ಎಸೆದ ಅನಾಮಿಕ..! Video



ಬೆಳಗಾವಿಯ ಹಿಂಡಲಗಾ ಜೈಲಿನ ಆವರಣದಲ್ಲಿ ಡ್ರಗ್ಸ್ ಹಾಗೂ ಮೊಬೈಲ್ ಗಳನ್ನು ಎಸೆದು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂಡಲಗಾ ಜೈಲಿಗೆ ಬೆಳಗಾವಿ ನಗರ ಪೊಲೀಸ್ ಆಯುಕ್ತರು ಭೇಟಿ ನೀಡಿದ್ದಾರೆ. ( Hindalaga jail )

ಘಟನೆ ಬೆನ್ನಲ್ಲೇ ಪೊಲೀಸ್ ಆಯುಕ್ತ ಭೂಷಣ್ ಭೋರಸೆ ಹಿಂದಲಗಾ ಜೈಲಿಗೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿದ್ದಾರೆ. ಜೈಲಧಿಕಾರಿಗಳು, ಸಿಬ್ಬಂದಿಯಿಂದ ಮಾಹಿತಿ ಪಡೆದಿದ್ದಾರೆ.

ಹಿಂಡಲಗಾ ಜೈಲಿನ ಬಳಿ ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಬಂದ ದುಷ್ಕರ್ಮಿಯೊಬ್ಬ ಜೈಲಿನ ಆವರಣಕ್ಕೆ ಡ್ರಗ್ಸ್ ಹಾಗೂ ಮೊಬೈಲ್ ಎಸೆದು ಪರಾರಿಯಾಗಿದ್ದಾನೆ. ಈ ದೃಶ್ಯ ಜೈಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಜೈಲಿನಲ್ಲಿರುವ ಕೈದಿಗಳಿಗೆ ಮಾದಕ ವಸ್ತುಗಳು, ಮೊಬೈಲ್ ಫೋನ್ ಈರಿತಿ ಪೂರೈಕೆಯಾಗುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಕಮಿಷನರ್ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!