ಗೋಕಾಕ್ ಪೊಲೀಸ್ ಠಾಣೆ ಮುಂದೆ ಕುಳಿತು ಎಣ್ಣೆ ಹೊಡೆದ ಆಸಾಮಿ ; ವೀಡಿಯೋ ನೋಡಿ
ಬೆಳಗಾವಿ : ಗೋಕಾಕ್ ಪೊಲೀಸ್ ಠಾಣೆ ಮುಂದಿನ ರಸ್ತೆ ಮೇಲೆ ಕುಳಿತು ಭರ್ಜರಿ ಎಣ್ಣೆ ಪಾರ್ಟಿ ಮಾಡಿದ್ದಲ್ಲದೆ ಅಲ್ಲಿಯೇ ತೂರಾಡಿರುವ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಗೋಕಾಕ್ ಶಹರ ಪೊಲೀಸ್ ಠಾಣೆ ಮುಂದೆ ಘಟನೆ ನಡೆದಿದೆ. ಎಣ್ಣೆ ಜೊತೆ ಸ್ಮ್ಯಾಕ್ಸ್ ಹಿಡಿದುಕೊಂಡು ಬಂದ ಆಸಾಮಿ ನಡು ರಸ್ತೆಯಲ್ಲೇ ಭರ್ಜರಿ ಪಾರ್ಟಿ ಮಾಡಿದ್ದಾನೆ.
ಠಾಣೆ ಮುಂದೆ ಇಷ್ಟೆಲ್ಲಾ ಹುಚ್ಚಾಟ ನಡೆದರು ಪೊಲೀಸರ ಗಮನಕ್ಕೆ ಬಂದಿಲ್ಲ. ನಡು ರಸ್ತೆಯಲ್ಲಿ ಜನ ಓಡಾಡುತ್ತಿದ್ದರು ಡೋಂಟ್ ಕೇರ್ ಎಂದು ಆಸಾಮಿ ಎಣ್ಣೆ ಹೊಡೆದಿದ್ದಾನೆ.

