
ಬೆಳಗಾವಿ ವಾಯ್ಸ್ ವರದಿ ಫಲಶೃತಿ ; ಕುಕಡೊಳ್ಳಿ ಗ್ರಾಮಕ್ಕೆ ಬಂತು ವಿದ್ಯುತ್ ಟ್ರಾನ್ಪರ್ಮರ್,

ಬೆಳಗಾವಿ : ಕುಕಡೊಳ್ಳಿ ಗ್ರಾಮದ ಸೋಮೇಶ್ವರ ನಗರ ಹಾಗೂ ಗಣೇಶ ನಗರದಲ್ಲಿ ಪ್ರತಿದಿನ ವಿದ್ಯುತ್ ಸಮಸ್ಯೆ ಕುರಿತು ಬೆಳಗಾವಿ ವಾಯ್ಸ್ ವರದಿ ಪ್ರಕಟಿಸಿದ 48 ಗಂಟೆ ಒಳಗೆ ಹೆಸ್ಕಾಂ ಸಿಬ್ಬಂದಿ 63 ಕೆ.ವಿ ವಿದ್ಯುತ್ ಟ್ರಾನ್ಪರ್ಮರ್ ಅಳವಡಿಸಿದ್ದು ಗ್ರಾಮಸ್ಥರ ಮೊಗದಲ್ಲಿ ಸಂತಸ ಮೂಡಿದೆ.
“ ಸಚಿವರ ಸೂಚನೆಗೂ ತಲೆಕೆಡಿಸಿಕೊಳ್ಳದ ಹೆಸ್ಕಾಂ ಸಿಬ್ಬಂದಿ ; ಸಂಕಷ್ಟದಲ್ಲಿ ಕುಕಡೊಳ್ಳಿ ಗ್ರಾಮಸ್ಥರು ” ತಲೆಬರಹದ ಅಡಿಯಲ್ಲಿ ಸೋಮವಾರ ಜನರ ಸಂಕಷ್ಟದ ಕುರಿತು ನಿಮ್ಮ ಬೆಳಗಾವಿ ವಾಯ್ಸ್ ವರದಿ ಪ್ರಕಟಿಸಿತ್ತು. ಸಧ್ಯ ಎಚ್ಚೆತ್ತುಕೊಂಡ ಅಧಿಕಾರಿಗಳು 48 ಗಂಟೆಯಲ್ಲಿ ಸಮಸ್ಯೆಗೆ ಪರಿಹಾರ ನೀಡಿದ್ದಾರೆ.

ತಾಲೂಕಿನ ಕುಕಡೊಳ್ಳಿ ಗ್ರಾಮದ ಸೋಮೇಶ್ವರ ನಗರ ಹಾಗೂ ಗಣೇಶ ನಗರದಲ್ಲಿ ಪ್ರತಿದಿನ ವಿದ್ಯುತ್ ಸಮಸ್ಯೆ ಉಂಟಾಗುತ್ತಿದೆ. ಸಧ್ಯ 25 ಕೆ.ವಿ ವಿದ್ಯುತ್ ಟ್ರಾನ್ಪರ್ಮರ್ ಇದ್ದು ಇದರಿಂದ ಎರಡೂ ನಗರಗಳಿಗೆ ವಿದ್ಯುತ್ ಪೂರೈಕೆ ಸಮಸ್ಯೆ ಆಗುತ್ತಿದ್ದು ಇದನ್ನು 63 ಕೆ.ವಿ ಬದಲಾಯಿಸಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು.
ಸೋಮೇಶ್ವರ ನಗರ ಹಾಗೂ ಗಣೇಶ ನಗರಕ್ಕೆ ಪೂರೈಕೆಯಾಗುತ್ತಿದ್ದ ವಿದ್ಯುತ್ ಟ್ರಾನ್ಪರ್ಮರ್ ಬದಲಾಯಿಸಿದ್ದು 63 ಕೆ.ವಿ ವಿದ್ಯುತ್ ಟ್ರಾನ್ಪರ್ಮರ್ ಅಳವಡಿಕೆ ಮಾಡಲಾಗಿದೆ. ಜನರ ಸಮಸ್ಯೆ ಕುರಿತು ಧ್ವನಿ ಎತ್ತಿದ ಬೆಳಗಾವಿ ವಾಯ್ಸ್ ಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಹೆಸ್ಕಾಂ ಸಿಬ್ಬಂದಿಗೆ ಗ್ರಾಮಸ್ಥರು ಧನ್ಯವಾದ ತಿಳಿಸಿದ್ದಾರೆ.