ಗಾಂಧಿ ಗ್ರಾಮ ಪುರಸ್ಕಾರಕ್ಕೆ ಬೆಳಗಾವಿಯ 14 ಗ್ರಾಮ ಪಂಚಾಯತಿ ಆಯ್ಕೆ
ಬೆಳಗಾವಿ : 2022 / 23 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕುಗಳ ಒಟ್ಟು 14 ಗ್ರಾಮ ಪಂಚಾಯತಿಗಳು ಆಯ್ಕೆಯಾಗಿವೆ.
ಈ ಕುರಿತು ಆದೇಶಿಸಿರುವ ಜಿಲ್ಲಾ ಪಂಚಾಯತ್ ಕಾರ್ಯಾಲಯ. ಗಾಂಧಿ ಗ್ರಾಮ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಿದ್ದ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಲಾಗಿದೆ.
ಅಥಣಿ – ಐಗಿಳಿ, ಬೈಲಹೊಂಗಲ – ಉಡಿಕೇರಿ, ಬೆಳಗಾವಿ – ಬಸ್ತವಾಡ, ಚಿಕ್ಕೋಡಿ – ಅಂಕಲಿ, ಗೋಕಾಕ್ – ಮಕ್ಕಳಗೇರಿ, ಹುಕ್ಕೇರಿ – ಕುರಣಿ, ಕಾಗವಾಡ – ಮಂಗಸೂಳಿ.
ಖಾನಾಪುರ – ಬೇಕವಾಡ, ಕಿತ್ತೂರು – ಉಗರಖೋಡ, ಮೂಡಲಗಿ – ರಾಜಾಪೂರ, ನಿಪ್ಪಾಣಿ – ಸಿದ್ನಾಳ, ರಾಮದುರ್ಗ – ಸುರೇಬಾನ, ರಾಯಬಾಗ – ಜಲಾಲಪೂರ, ಸವದತ್ತಿ – ಸಿಧೋಗಿ.


