
ಗ್ಯಾಸ್ ಸಿಲಿಂಡರ್ ತುಂಬಿದ್ದ ಟ್ರಕ್ ಪಲ್ಟಿ ; ಚಾಲಕ ಸಾವು

ನಿಪ್ಪಾಣಿ: ಖಾಲಿ ಸಿಲಿಂಡರಗಳನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆ ನಿಪ್ಪಾಣಿ ರಾಷ್ಟ್ರೀಯ ಹೆದ್ದಾರಿಯ ತಾವಂದಿ ಘಾಟ್ ನಲ್ಲಿ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ.ತೀರ್ಥಸಿಂಗ್ (41) ಮೃತಪಟ್ಟ ಚಾಲಕ ಮೂಲತ ಪಂಜಾಬ ರಾಜ್ಯದವನು ಎಂದು ಗುರುತಿಸಲಾಗಿದೆ.
ಲಾರಿಯಲ್ಲಿ ಖಾಲಿ ಸಿಲಿಂಡರಗಳನ್ನು ಇದ್ದ ಕಾರಣ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಲಾರಿ ಪಲ್ಟಿಯಾದ ಪರಿಣಾಮ ರಸ್ತೆಯಲ್ಲಿ ಸಿಲಿಂಡರ್ ಗಳು ಚೆಲ್ಲಾಪಿಲ್ಲಿಯಾಗಿವೆ.
6 ಗಂಟೆಗಳ ಕಾಲ ಹೆದ್ದಾರಿಯಲ್ಲಿ ದ್ವಿಮುಖ ಸಂಚಾರವನ್ನು ಬಂದ್ ಮಾಡಲಾಗಿತ್ತು. ಘಟನಾ ಸ್ಥಳಕ್ಕೆ ಸಿಪಿಐ ಬಿ.ಎಸ್.ತಳವಾರ, ಪಿಎಸ್ಐ ಉಮಾದೇವಿ, ಶಿವರಾಜ ನಾಯಿಕವಾಡಿ, ರಮೇಶ ಪವಾರ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.