ಹಣಕ್ಕೆ ಬೇಡಿಕೆ ಇಟ್ಟಿದ್ದ ನಾಲ್ವರು ನಕಲಿ ಪತ್ರಕರ್ತರು ಪೊಲೀಸ್ ಬಲೆಗೆ : ಯೂಟ್ಯೂಬ್ ಚಾನಲ್ ಹೆಸರಲ್ಲಿ ವಸೂಲಿ
ಬೆಂಗಳೂರು : ನಾವು ಪತ್ರಕರ್ತರು ಎಂದು ಹೇಳಿಕೊಂಡು ಜನರಿಂದ ಸುಲಿಗೆ ಮಾಡುತ್ತಿದ್ದ ನಕಲಿ ಪತ್ರಕರ್ತರ ತಂಡವನ್ನು ಹೆಡೆಮುರಿ ಕಟ್ಟಿರುವ ಪೊಲೀಸರು ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರ ಪ್ರದೇಶದ ಹಲವುಕಡೆ ನಾವು ಪತ್ರಕರ್ತರು ಎಂದು ಹೇಳಿ ಅಂಗಡಿಗಳಲ್ಲಿ ಹಣ ವಸೂಲಿ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವ್ಯಕ್ತಿಯೋರ್ವನ ಬಳಿ ಪದೇ ಪದೇ ಹಣಕ್ಕೆ ಬೇಡಿಕೆ ಇಟ್ಟು ಕಾಡಿಸುತ್ತಿದ್ದ ಆರೋಪಿಗಳು ಸೆರೆಸಿಕ್ಕಿದ್ದಾರೆ.
ಬಂಧಿತರನ್ನು ಆನಂದ್, ಕೇಶವಮೂರ್ತಿ, ಶ್ರೀನಿವಾಸ್, ಆತ್ಮಾನಂದ್ ಎಂದು ಗುರುತಿಸಲಾಗಿದೆ. ಇವರು ತಮ್ಮನ್ನು ತಾವು, ಎ.ಕೆ ನ್ಯೂಸ್ ಚಾನೆಲ್ ನವರು ಎಂದು ಹೇಳಿಕೊಂಡು ಜನರನ್ನು ಯಾಮಾರಿಸುತ್ತಿದ್ದರು.
ಕೆಲ ವ್ಯಕ್ತಿಗಳ ಬಳಿ ಹೋಗಿ ನಿಮ್ಮ ಬಗ್ಗೆ ಸುದ್ದಿ ಬರೆದು ಪ್ರಸಾರ ಮಾಡುತ್ತೇವೆ. ಪೊಲೀಸರಿಗೆ ಹೇಳಿ ಕ್ರಿಮಿನಲ್ ಕೇಸ್ ದಾಖಲು ಮಾಡಿಸುತ್ತೇವೆ ಎಂದು ಬೆದರಿಸುತ್ತಿದ್ದ ಆಸಾಮಿಗಳು ನಂತರ ಹಣ ಸುಮ್ಮನಾಗಲು ಹಣಕ್ಕೆ ಬೇಡಿಕೆ ಇರಿಸುತ್ತಿದ್ದರು.

