Select Page

ರಾಜಮಾತಾ ಜಿಜಾವು ಸಾಂಸ್ಕೃತಿಕ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ : ಶಾಸಕ ಮಾರುತಿರಾವ್ ಮೂಳೆ

ರಾಜಮಾತಾ ಜಿಜಾವು ಸಾಂಸ್ಕೃತಿಕ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ : ಶಾಸಕ ಮಾರುತಿರಾವ್ ಮೂಳೆ

ಬೆಳಗಾವಿ : ಬದಲಾದ ಕಾಲಘಟ್ಟದಲ್ಲಿ ಮನುಷ್ಯನ ಜೀವನ ಶೈಲಿ ಸಂಪೂರ್ಣ ಬದಲಾಗಿದೆ. ಶಿಕ್ಷಣದ ಜೊತೆಗೆ ಇಂದಿನ ಯುವ ಸಮೂಹದಲ್ಲಿ ಭವಿಷ್ಯದ ಕುರಿತು ನಿರೀಕ್ಷೆಗಳು ಹೆಚ್ಚಾಗತೊಡಗಿವೆ. ಇದೇ ಕಾರಣಕ್ಕೆ ಸರಿಯಾದ ಸಂದರ್ಭದಲ್ಲಿ ಮದುವೆಯಾಗುತ್ತಿಲ್ಲ. ಇದೆಲ್ಲವನ್ನೂ ಸರಿಪಡಿಸುವ ಕೆಲಸವನ್ನು ವಧು, ವರ ವೇದಿಕೆಗಳು ಮಾಡುತ್ತಿವೆ ಎಂದು ಪರಿಷತ್ ಸದಸ್ಯ ಮಾರುತಿರಾವ್ ಮೂಳೆ ಅಭಿಪ್ರಾಯಪಟ್ಟರು.


ಭಾನುವಾರ ನಗರದ ರೂಪಾಲಿ ಕನ್ವೆನ್ಷನ್‌ ಹಾಲ್‌ನಲ್ಲಿ ರಾಜಮಾತಾ ಜಿಜಾವು ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ಮರಾಠಾ ಸಮಾಜದ ವಧು–ವರ ಮೇಳದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರತಿಯೊಬ್ಬರ ವೈವಾಹಿಕ ಬದುಕಿನಲ್ಲಿ ಸೂಕ್ತ ಜೋಡಿಯ ಆಯ್ಕೆ ಸಮಯ ಮಹತ್ವ ಘಟ್ಟ. ಆದರೆ ಬದಲಾದ ಜೀವನ ಶೈಲಿಯಿಂದ ಮದುವೆಗಳು ತಡವಾಗುತ್ತಿವೆ. ಇದರಿಂದ ಪೋಷಕರು ನೋವು ಅನುಭವಿಸುವ ಪರಿಸ್ಥಿತಿ ಬಂದೊದಗಿದೆ. ಇಂತಹ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಡಾ. ಸೋನಾಲಿ ಸರ್ನೋಬತ್ ಅವರು ರಾಜಮಾತಾ ಜಿಜಾವು ಸಾಂಸ್ಕೃತಿಕ ಪ್ರತಿಷ್ಠಾನದ ಮೂಲಕ ಮಹತ್ವದ ಕಾರ್ಯ ಕೈಗೊಂಡಿದ್ದಾರೆ ಎಂದರು.

ಪ್ರಾಸ್ತಾವಿಕವಾಗಿ ಡಾ. ಸೋನಾಲಿ ಸರ್ನೋಬತ್ ಮಾತನಾಡಿ. ವಧು–ವರ ಮೇಳ ಸಮಾಜಹಿತದ ಮಹತ್ವದ ಕಾರ್ಯವಾಗಿದೆ. ಈ ವೇದಿಕೆಯ ಮೂಲಕ ಸಮುದಾಯ ಒಗ್ಗೂಡಿಸುವ ಕಾರ್ಯ ನಡೆದಿದೆ. ಇಂದಿನ ಸಮಾಜದಲ್ಲಿ ತಡವಾಗಿ ವಿವಾಹ ಆಗುತ್ತಿರುವ ಪರಿಣಾಮ ಪೋಷಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಕಾರಣಕ್ಕೆ ರಾಜಮಾತಾ ಜಿಜಾವು ಸಾಂಸ್ಕೃತಿಕ ಪ್ರತಿಷ್ಠಾನ ಸಾಮಾಜಿಕ ಕಾರ್ಯ ಕೈಗೊಂಡಿದೆ ಎಂದರು.

ನಿಯತಿ ಫೌಂಡೇಶನ್ ಮೂಲಕ ಇದಕ್ಕೂ ಮುನ್ನ ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗಾಗಿ ಅನೇಕ ಸಾಮಾಜಿಕ ಉಪಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದೇ ಸಾಲಿನಲ್ಲಿ ಮುಂದಿನ ದಿನಗಳಲ್ಲಿ ಸಾಮೂಹಿಕ ವಿವಾಹ ಸಮಾರಂಭವನ್ನು ಆಯೋಜಿಸುವ ಉದ್ದೇಶವಿದ್ದು, ಈ ಕಾರ್ಯಗಳಿಗೆ ಕರ್ಣಾಟಕ ರಾಜ್ಯ ಕ್ಷತ್ರಿಯ ಮರಾಠಾ ಪರಿಷತ್ತಿನ ಬೆಂಬಲವೂ ದೊರಕುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.

ವಧು, ವರ ಮೇಳಕ್ಕೆ ಮರಾಠಾ ಸಮಾಜದ ಸುಮಾರು 400ಕ್ಕೂ ಹೆಚ್ಚು ಆಸಕ್ತ ವಧು–ವರರು ನೋಂದಣಿ ಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಪಾಲಕರು ಭಾಗವಹಿಸಿ ಶ್ಲಾಘನೆ ವ್ಯಕ್ತಪಡಿಸಿದರು.

Advertisement

Leave a reply

Your email address will not be published. Required fields are marked *

error: Content is protected !!