
ಇಂದು ಪರಪ್ಪನ ಅಗ್ರಹಾರಕ್ಕೆ ಶಿಪ್ಟ್ ಆಗ್ತಾರಾ ಕೊಲೆ ಆರೋಪಿ ದರ್ಶನ್ ಗ್ಯಾಂಗ್

ಬೆಂಗಳೂರು : ಚಿತ್ರದುರ್ಗ ಮೂಲಕ ವ್ಯಕ್ತಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ನಟ ದರ್ಶನ್ ಹಾಗೂ ಅವರ ಕೊಲೆಗಡುಕ ಗ್ಯಾಂಗ್ ನ ಪೊಲೀಸ್ ಕಸ್ಟಡಿ ಅವಧಿ ನಾಳೆ ಮುಗಿಯಲಿದ್ದು ಇಂದೇ ಕೋರ್ಟ್ ಗೆ ಕರೆದೊಯ್ಯುವ ಸಾಧ್ಯತೆ ಇದೆ.
ಈಗಾಗಲೇ ಪ್ರಕರಣದ ವಿಚಾರಣೆ ಭಾಗಶಃ ಮುಕ್ತಾಯವಾದ ಹಿನ್ನಲೆಯಲ್ಲಿ ಆರೋಪಿಗಳನ್ನು ಕೋರ್ಟ್ ಗೆ ಹಸ್ತಾಂತರ ಮಾಡುವ ಪ್ರಕ್ರಿಯೆ ಇಂದೇ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಆರೋಪಿತರಿಗೆ ಜಾಮೀನು ಸಿಗುವ ಸಾಧ್ಯತೆ ತುಂಬಾ ವಿರಳವಾದ ಹಿನ್ನಲೆಯಲ್ಲಿ ಜೈಲು ವಾಸ ಖಚಿತ ಎಂಬುದು ದೃಢವಾಗಿದೆ.
ಇನ್ನೂ ಪ್ರಕರಣದ ಕುರಿತು ಆರೋಪಿತರಿಗೆ ಜಾಮೀನು ನೀಡುವ ಸಾಧ್ಯತೆ ತುಂಬಾ ಕಡಿಮೆ. ಕಾರಣ ಆರೋಪಿತ ದರ್ಶನ್ ತನ್ನ ಪ್ರಭಾವ ಬಳಸಿಕೊಂಡು ಪ್ರಕರಣದ ಸಾಕ್ಷಿಗಳನ್ನು ನಾಶಮಾಡುವ ಸಾಧ್ಯತೆ ಇರುವ ಕಾರಣ ನ್ಯಾಯಾಲಯ ಜಾಮೀನು ನಿರಾಕರಣೆ ಮಾಡಬಹುದು.
ಕೊಲೆ ಆರೋಪದಲ್ಲಿ ಬಂಧಿಯಾಗಿರುವ ನಟ ದರ್ಶನ್ ಗೆ ಈಗ ತನ್ನ ತಪ್ಪಿನ ಅರಿವಾದಂತೆ ಕಾಣುತ್ತಿದೆ. ಠಾಣೆಯ ಅಧಿಕಾರಿಗಳ ಬಳಿ ಆರೋಪಿ ಕಣ್ಣೀರು ಹಾಕುತ್ತಿದ್ದು ತನ್ನ ತಪ್ಪಿನಿಂದ ಆದ ಅವಾಂತರಗಳ ಕುರಿತು ಯೋಚಿಸಿ ನೊಂದುಕೊಳ್ಳುತ್ತಿದ್ದಾ ಎಂದು ತಿಳಿದುಬಂದಿದೆ.