ಬಳ್ಳಾರಿ ಜೈಲಿನಿಂದ ನಟ ದರ್ಶನ್ ಬಿಡುಗಡೆ….?
ಬೆಂಗಳೂರು : ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿ ಜೈಲು ಸೇರಿರುವ ನಟ ದರ್ಶನ್ ಜೈಲು ಅರ್ಜಿ ವಿಚಾರಣೆ ಮುಕ್ತಾಯವಾಗಿದ್ದು ಇಂದು ಡಿ ಬಾಸ್ ಹೊರ ಬರುತ್ತಾರಾ ಎಂಬ ಕುತೂಹಲ ಮೂಡಿದೆ.
ಹೌದು ಕಳೆದ ನೂರು ದಿನಗಳಿಂದ ಜೈಲು ವಾಸ ಅನುಭವಿಸುತ್ತಿರುವ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ಇಂದಿಗೆ ತೀರ್ಪು ಕಾಯ್ದಿರಿಸಿತ್ತು. ಇವತ್ತು ನಟ ದರ್ಶನ್ ಜಾಮೀನು ಅರ್ಜಿ ಆಧರಿಸಿ ಕೋರ್ಟ್ ಮಹತ್ವದ ತೀರ್ಪು ನೀಡಲಿದೆ.
57 ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ನಡೆದ ವಾದ ಹಾಗೂ ಪ್ರತಿವಾದನ್ನು ನ್ಯಾಯಾಧೀಶರು ಸಮಗ್ರವಾಗಿ ಆಲಿಸಿದ್ದಾರೆ. ದರ್ಶನ್ ಪರವಾಗಿ ವಕಿಲ ಸಿ.ವಿ ನಾಗೇಶ್ ವಾದ ಮಾಡಿದ್ದರೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಪ್ರಸನ್ನ ಕುಮಾರ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದಾರೆ.
ಈಗಾಗಲೇ ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ಮೂವರು ಬಿಡುಗಡೆ ಹೊಂದಿದ್ದಾರೆ. ಇನ್ನೂ ಪ್ರಕರಣದ A1 ಆರೋಪಿ ಪವಿತ್ರ ಗೌಡ ಜಾಮೀನು ಅರ್ಜಿ ತೀರ್ಪು ಇವತ್ತೇ ಹೊರಬರಲಿದೆ. ಜೊತೆಗೆ ಉಳಿದ ಎಂಟು ಜನ ಆರೋಪಿತರ ಬೇಲ್ ಅರ್ಜಿ ವಿಚಾರಣೆ ಇಂದು ನಡೆಯಲಿದೆ.
ಈ ಬಾರಿ ನಟ ದರ್ಶನ್ ದಸರಾ ಹಬ್ಬವನ್ನು ಜೈಲಿನಲ್ಲಿ ಕಳೆಯುವಂತಾಯಿತು. ತೀವ್ರವಾಗಿ ಬೆನ್ನು ನೊಕವಿನಿಂದ ಬಳಲುತ್ತಿರುವ ನಟ ದರ್ಶನ್ ಅವರಿಗೆ ಚಿಕಿತ್ಸೆ ಅವಶ್ಯಕತೆ ಇದೆ ಎಂದು ವೈದ್ಯರು ಹೇಳಿದ್ದಾರೆ. ಈ ಆಧಾರದಲ್ಲಿ ನಟ ದರ್ಶನ್ ಗೆ ಬೇಲ್ ಸಿಗುವ ನಿರೀಕ್ಷೆಯಲ್ಲಿ ಇದ್ದಾರೆ.

