ಕುರುಕ್ಷೇತ್ರ ಕಂಟಕ ; ಈ ಚಿತ್ರದಿಂದ ಹಲವರ ಬದುಕಿಗೆ ಬಿತ್ತಾ ಬೆಂಕಿ…?
ಬೆಂಗಳೂರು : ಸಧ್ಯ ಗಾಂಧಿನಗರದಲ್ಲಿ ಕುರುಕ್ಷೇತ್ರ ಚಲನಚಿತ್ರದ ಕುರಿತು ಚರ್ಚೆ ಜೋರಾಗಿದೆ. ಈ ಸಿನೆಮಾ ತೆರಗೆ ಬಂದು ವರ್ಷಗಳೇ ಉರುಳಿವೆ. ಆದರೆ ಸಧ್ಯ ಈ ಚಿತ್ರದಿಂದ ಮಹಾ ಕಂಟಕ ಎದುರಾಗಿದೆಯಾ ಎಂಬ ಮಾತುಗಳು ಜೋರಾಗಿ ಕೇಳಿಬರುತ್ತಿವೆ.
ಹೌದು ಕುರುಕ್ಷೇತ್ರ ಚಿತ್ರ ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ಚಿತ್ರ. ಈ ಚಲನಚಿತ್ರದಲ್ಲಿ ಅನೇಕ ದಿಗ್ಗಜರು ನಟಿಸಿ ಸೂಪರ್ ಹಿಟ್ ಕೊಟ್ಟಿದ್ದರು. ಆದರೆ ಸಿನೆಮಾದಿಂದ ಒಂದು ನೆಗೆಟಿವ್ ಎನರ್ಜಿ ಅನೇಕ ನಟರನ್ನು ಮಾಡುತ್ತಿದೆ ಎಂಬ ಮಾತು ಹಲವೆಡೆ ಕೇಳಿಬರುತ್ತಿವೆ.
ಸಧ್ಯ ಕುರುಕ್ಷೇತ್ರ ಸಿನೆಮಾದಲ್ಲಿ ನಟಿಸಿದ್ದ ನಟ ದರ್ಶನ್ ಈಗಾಗಲೇ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿ ಜೈಲು ಸೇರಿದ್ದಾರೆ. ನಟ ದರ್ಶನ್ ಬದುಕಿನ ಅತ್ಯಂತ ಕೆಟ್ಟ ದಿನಗಳನ್ನು ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನೂ ಇದೇ ಚಿತ್ರದ ನಿರ್ಮಾಪಕ ಹಾಗೂ ಮಾಜಿ ಸಚಿವ ಮುನಿರತ್ನ ವಿರುದ್ಧ ಜಾತಿ ನಿಂದನೆ ಹಾಗೂ ಕೊಲೆ ಬೆದರಿಕೆ ಆರೋಪದ ಮೇಲೆ ಜೈಲು ಸೇರಿದ್ದಾರೆ. ಸಧ್ಯ ಜೈಲು ಹಕ್ಕಿಯಾಗಿರುವ ಮುನಿರತ್ನ ಹೊರಬರುವ ಲಕ್ಷಣ ಸಧ್ಯಕ್ಕೆ ಕಾಣುತ್ತಿಲ್ಲ.
ಇನ್ನೂ ಇದೇ ಕುರುಕ್ಷೇತ್ರ ಸಿನೆಮಾದಲ್ಲಿ ನಟಿಸಿದ್ದ ಇನ್ನೊಬ್ಬ ಸ್ಟಾರ್ ನಟ ನಿಖಿಲ್ ಕುಮಾರಸ್ವಾಮಿ ಕೂಡಾ ಚುನಾವಣಾ ರಂಗದಲ್ಲಿ ಸತತ ಸೋಲು ಕಾಣುವ ಮೂಲಕ ಹಿನ್ನಡೆ ಅನುಭವಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆ, ಹಾಗೂ ವಿಧಾನಸಭಾ ಚುನಾವಣೆ ಸೋಲಿಗೆ ಮತ್ತದೇ ಕುರುಕ್ಷೇತ್ರ ಕಂಟಕ ಕಾರಣ ಎಂದು ಹೇಳಲಾಗುತ್ತಿದೆ.
ಇದೇ ಸಿನೆಮಾದಲ್ಲಿ ನಟಿಸಿದ್ದ ಕನ್ನಡದ ಕಂದ ಅಂಬರೀಶ್ ಅವರು ಸಿನೆಮಾ ಬಿಡುಗಡೆ ಮುಂಚೆ ಪ್ರಾಣ ಕಳೆದುಕೊಂಡರು. ಈ ಚಿತ್ರದಲ್ಲಿ ನಟಿಸಿದ್ದ ನಟಿ ಮೇಘನಾ ರಾಜ್ ನಿಜ ಜೀವನದಲ್ಲಿ ಗಂಡನನ್ನೇ ಕಳೆದುಕೊಂಡರು. ಇದೇ ರೀತಿಯಲ್ಲಿ ಅನೇಕರು ಕುರುಕ್ಷೇತ್ರ ಕಂಟಕ ಕ್ಕೆ ತುತ್ತಾಗಿದ್ದಾರೆ ಎಂಬ ಮಾತು ಜೋರಾಗಿದೆ.