ಬೆಳಗಾವಿ : ಗಣೇಶ ಮೆರವಣಿಗೆ ವೇಳೆ ವ್ಯಕ್ತಿ ಬಲಿ
ಬೆಳಗಾವಿ : ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಟ್ರ್ಯಾಕ್ಟರ್ ಗೆ ಸಿಲುಕಿ ವ್ಯಕ್ತಿ ಸಾವಣಪ್ಪಿರುವ ಘಟನೆ ಬೆಳಗಾವಿಯ ಪಾಟೀಲ ಗಲ್ಲಿಯಲ್ಲಿ ನಡೆದಿದೆ.
ಪಾಟೀಲ ಗಲ್ಲಿಯ ನಿವಾಸಿ ಸದಾನಂದ ಚವ್ಹಾಣ ಪಾಟೀಲ(48) ಮೃತ ವ್ಯಕ್ತಿ. ಇದೇ ಘಟನೆಯಲ್ಲಿ ವಿಜಯ ರಾಜಗೋಳ ಎಂಬುವರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಗಾವಿ ಜಿಲ್ಲಾಸ್ಪತ್ರೆಗೆ ಮಾಜಿ ಮೇಯರ್ ವಿಜಯ ಮೋರೆ ಹಾಗೂ ಶ್ರೀರಾಮಸೇನೆ ಹಿಂದುಸ್ಥಾನ ಅಧ್ಯಕ್ಷ ರಮಾಕಾಂತ ಕೊಂಡುಸ್ಕರ್ ಭೇಟಿ ನೀಡಿದ್ದರು . ಘಟನೆ ಬಗ್ಗೆ ಮಾತನಾಡಿದ ಮಾಜಿ ಮೇಯರ್ ವಿಜಯ ಮೋರೆ ಗಣೇಶ್ ವಿಸರ್ಜನೆ ವೇಳೆ ಕಪಿಲೇಶ್ವರ ಬ್ರಿಜ್ ಬಳಿ ಇಳಿಜಾರು ಇರುವುದರಿಂದ ಟ್ರಾಕ್ಟರ್ ಚಾಲಕನ ನಿಯಂತ್ರಣ ಸಿಗದೇ ಪಾಟೀಲ ಗಲ್ಲಿಯ ನಿವಾಸಿ ಸದಾನಂದ ಚವ್ಹಾಣ ಪಾಟೀಲ(48) ಮೃತರಾಗಿದ್ದಾರೆ.
ಮತ್ತೂರ್ವ ವ್ಯಕ್ತಿ ಗಂಭೀರ ಗಾಯಗೊಂಡಿದ್ದಾನೆ , ಕುಟುಂಬದಲ್ಲಿ ವ್ಯಕ್ತಿಯನ್ನು ಕಳೆದುಕೊಂಡ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದೆ ,ಬೆಳಗಾವಿಯ ಪ್ರತಿಯೊಂದು ಗಣೇಶ ಮಂಡಳಿಯವರು 10 ಸಾವಿರ ನೀಡಬೇಕೆಂದು ಮನವಿ ಮಾಡಿದರು.