Select Page

ಸಂಪುಟದಲ್ಲಿ ಹೊಸ ಮುಖಗಳ ಸೇರ್ಪಡೆ ; ಡಿಕೆಶಿ ಸುಳಿವು

ಸಂಪುಟದಲ್ಲಿ ಹೊಸ ಮುಖಗಳ ಸೇರ್ಪಡೆ ; ಡಿಕೆಶಿ ಸುಳಿವು



ಬೆಂಗಳೂರು : ಸಧ್ಯ ಡಿ.ಕೆ ಶಿವಕುಮಾರ್ ಅವರ ಸಂಪುಟದ ವಿಸ್ತರಣೆ ಮೇಲೆ ಎಲ್ಲರ ಚಿತ್ತ ನೆಟ್ಟಿದ್ದು ಯಾರಿಗೆ ಅವಕಾಶ ನೀಡುತ್ತಾರೆ ಎಂಬ ಪ್ರಶ್ನೆ ಅನೇಕರಲ್ಲಿದೆ. ಈ ಮಧ್ಯೆ ಹೊಸ ಮುಖಗಳಿಗೆ ಅವಕಾಶ ನೀಡುವ ಗಂಭೀರ ಚಿಂತನೆ ನಡೆಯುತ್ತಿದೆ ಎಂದು ಹೇಳುವ ಮೂಲಕ ಡಿಕೆಶಿ ಹೊಸಬರಲ್ಲಿ ಬರವಸೆ ಮೂಡಿಸಿದ್ದಾರೆ.

ಬೆಂಗಳೂರಿನ‌ ಶಿವಾನಂದ ಸರ್ಕಲ್ ಬಳಿ ಇರುವ ತಮ್ಮ‌ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇವರು. ಸಂಪುಟ ಸೇರಲು ಬಯಸಿರುವ ಹೊಸಬರಿಗೆ ಅವಕಾಶ ಸಿಗುವ ಸಾಧ್ಯತೆ ಕುರಿತು ಮುನ್ಸೂಚನೆ ನೀಡಿದ್ದಾರೆ.

ನಾನು ಇನ್ನೊಬ್ಬರ ಪ್ರಗತಿ ಹಾಗೂ ಅವಕಾಶ ತಡೆಯಲು ಬಯಸುವುದಿಲ್ಲ. ಪಕ್ಷದಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು ಎಂಬುದನ್ನು ಬಯಸುತ್ತೇನೆ ಎಂದರು. ಸಂಪುಟ ವಿಸ್ತರಣೆ ಜವಾಬ್ದಾರಿ ಹೈಕಮಾಂಡ್ ಹೆಗಲಿಗೆ ಇದೆ. ಈ ಕುರಿತು ವರಿಷ್ಠರ ಮಟ್ಟದಲ್ಲಿ ಚರ್ಚೆ ನಡೆಯಲಿದೆ ಎಂದರು.

ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆಯಿಂದ‌ ಹೊಸ ಶಾಸಕರ ಮೊಗದಲ್ಲಿ ಖುಷಿ ಮೂಡಿದ್ದು ಇದು ಎಷ್ಟರಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತದೆ ಎಂಬುದನ್ನು ಕಾದು ನೋಡಬೇಕು.


Advertisement

Leave a reply

Your email address will not be published. Required fields are marked *

error: Content is protected !!