Select Page

ಸವದಿಗೆ ಸಚಿವಸ್ಥಾನ ನೀಡದಿದ್ದರೆ ಗಾಣಿಗ ಸಮಾಜದಿಂದ ಕಠಿಣ ನಿರ್ಧಾರದ ಎಚ್ಚರಿಕೆ

ಸವದಿಗೆ ಸಚಿವಸ್ಥಾನ ನೀಡದಿದ್ದರೆ ಗಾಣಿಗ ಸಮಾಜದಿಂದ ಕಠಿಣ ನಿರ್ಧಾರದ ಎಚ್ಚರಿಕೆ



ಬೆಳಗಾವಿ : ಮಾಜಿ ಡಿಸಿಎಂ ಹಾಗೂ ಹಾಲಿ ಅಥಣಿ ಶಾಸಕ ಲಕ್ಷ್ಮಣ್ ಸವದಿ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಗಾಣಿಗ ಸಮಾಜದ ಮುಖಂಡರು ಪ್ರತಿಭಟನೆ ನಡೆಸಿದರು.

ಸೋಮವಾರ ಬೆಳಗಾವಿ ನಗರದ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮೂಲಕ
ಗಾಣಿಗ ಸಮಾಜ ಮುಖಂಡರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಮುಖಂಡರು. ಕರ್ನಾಟಕದಲ್ಲಿ ಸುಮಾರು 40 ರಿಂದ 50 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು, ಸ್ವಾತಂತ್ರ್ಯ ನಂತರ ನಮ್ಮ ಸಮಾಜಕ್ಕೆ ಇಲ್ಲಿಯ ವರೆಗೂ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಸಚಿವ ಸ್ಥಾನವನ್ನು ನೀಡಿಲ್ಲ. ಒಂದು ವೇಳೆ ಗಾಣಿಗ ಸಮಾಜಕ್ಕೆ ಸಚಿವ ಸ್ಥಾನ ನೀಡದಿದ್ದರೇ, ಮುಂಬರುವ ದಿನಗಳಲ್ಲಿ ಗಾಣಿಗ ಸಮಾಜದಿಂದ ಕಠಿಣ ತಿರ್ಮಾನ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದರು.

ಗಾಣಿಗ ಸಮಾಜದ ಅತ್ಯಂತ ಹಿಂದುಳಿದ ಸಮಾಜವಾಗಿದೆ. ಈ ಸಮಾಜದವರೇ ಆದ ಲಕ್ಷ್ಮಣ್ ಸವದಿ ಅವರು ಹಲವಾರು ಜನಪರ ಕಾರ್ಯಗಳನ್ನು ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ತನ್ನ ಸಂಪುಟ ವಿಸ್ತರಣೆಯಲ್ಲಿ ಲಕ್ಷ್ಮಣ್ ಸವದಿ ಅವರನ್ನು ಗಂಭೀರವಾಗಿ ಪರಿಗಣಿಸಬೇಕು. ಸಂಪೂರ್ಣ ಸಮಾಜ ಅವರ ಬೆಂಬಲಿಕ್ಕಿದು, ಒಂದು ವೇಳೆ ಸಚಿವ ಸ್ಥಾನ ನೀಡದಿದ್ದರೇ ರಾಜ್ಯಾದ್ಯಂತ ಗಾಣಿಗ ಸಮಾಜದಿಂದ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.


Advertisement

Leave a reply

Your email address will not be published. Required fields are marked *

error: Content is protected !!