ಮುಂದಿನ ಸಿಎಂ ಡಿಕೆಶಿ ; ವಿನಯ್ ಗುರೂಜಿ ಸ್ಪೋಟಕ ಭವಿಷ್ಯ
ಚಿಕ್ಕೋಡಿ : ಸಿದ್ದರಾಮಯ್ಯನವರ ನಂತರ ಅವಕಾಶ ಸಿಗುವುದಾದರೆ ಪಕ್ಷ ಸಂಘಟನೆಯಲ್ಲಿ ಶ್ರಮವಹಿಸಿರುವ ಡಿ.ಕೆ ಶಿವಕುಮಾರ್ ಅಜ್ಜಯ್ಯನ ಆಶಿರ್ವಾದದಿಂದ ಸಿಎಂ ಹುದ್ದೆ ಅಲಂಕರಿಸುತ್ತಾರೆ ಎಂದು ಚಿಕ್ಕಮಗಳೂರಿನ ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ ಭವಿಷ್ಯ ನುಡಿದಿದ್ದಾರೆ.
ಶುಕ್ರವಾರ ಹುಕ್ಕೇರಿ ಹಿರೇಮಠ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಇವರು. ಪಕ್ಷದ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಸಾಕಷ್ಟು ಕೆಲಸ ಮಾಡಿದ್ದಾರೆ. ಸಂಘಟನಾತ್ಮಕವಾಗಿ ಇವರ ಕೊಡುಗೆ ಅಪಾರ. ಗುರುಭಕ್ತಿ ಹಾಗೂ ನಾಟಕೀಯವಲ್ಲದ ನಡೆಯಿಂದ ಪ್ರಾಮಾಣಿಕವಾಗಿ ಇದ್ದು ಅಜ್ಜಯ್ಯನ ಆಶಿರ್ವಾದದಿಂದ ಸಿಎಂ ಹುದ್ದೆ ಅಲಂಕರಿಸುತ್ತಾರೆ ಎಂದರು.
ನಾಟಕ ಇಲ್ಲದ ರಾಜಕಾರಣಿ ಡಿಕೆಶಿ ಅವರಿಗೆ ನಾಟಕ ಮಾಡಲು ಬರುವದಿಲ್ಲ. ವೈಕುಂಠ ಏಕಾದಶಿ ದಿನ ಡಿಕೆಶಿ ಸಿಎಂ ಆಗಲಿ ಎಂದು ಪ್ರಾರ್ಥನೆ ಮಾಡುತ್ತೇನೆ.ಅಜ್ಜಯ್ಯ ನ ಮೇಲೆ ನಿಷ್ಠೆ, ಧರ್ಮದ ಮೇಲೆ ಶೃದ್ದೆ ಡಿಕೆಶಿಗಿದೆ.ಗುರುಗಳ ಅನುಗ್ರಹದಿಂದ ಇದೇ ಸರಕಾರದ ಅವಧಿಯಲ್ಲಿ ಡಿಕೆ ಶಿವಕುಮಾರ ಸಿಎಂ ಸ್ಥಾನದಲ್ಲಿ ಕೂರುತ್ತಾರೆ ಎಂದರು.