ಅಥಣಿ – ದೀರ್ಘದಂಡ ನಮಸ್ಕಾರ ಹಾಕುವಾಗ ವಾಹನ ಹರಿದು ಯುವತಿ ಸಾವು
ಅಥಣಿ : ದೇವರಿಗೆ ದೀರ್ಘ ದಂಡ ನಮಸ್ಕಾರ ಸಲ್ಲಿಸುವ ವೇಳೆ ತಲೆಮೇಲೆ ಕಾರಿನ ಚಕ್ರ ಹರಿದು ಸ್ಥಳಕ್ಕೆಲ್ಲೇ ಯುವತಿ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೀರ್ಥ ಗ್ರಾಮದಲ್ಲಿ ಜರುಗಿದೆ.
ಮೃತ ಯುವತಿಯನ್ನು ಐಶ್ವರ್ಯ ನಾಯಿಕ(23) ರಂದು ಗುರುತಿಸಲಾಗಿದ್ದು, ಅಥಣಿ ತಾಲೂಕಿನ ತೀರ್ಥ ಗ್ರಾಮದ ನಿವಾಸಿಯಾಗಿದ್ದಾರೆ. ಗ್ರಾಮದ ಜಾತ್ರೆಯ ಹಿನ್ನೆಲೆ ದೇವರಿಗೆ ದೀರ್ಘದಂಡ ನಮಸ್ಕಾರ ಸಲ್ಲಿಸುವ ಸಲುವಾಗಿ ಕೃಷ್ಣಾ ನದಿಯಿಂದ ದೇವಸ್ಥಾನವರಿಗೆ ನಮಸ್ಕಾರ ಹಾಕುತ್ತಾ ಬರುತ್ತಿರುವ ಯುವತಿಯ ತಲೆ ಮೇಲೆ ಕಾರು ಹರಿದು ಸ್ಥಳಕ್ಕೆ ಯುವತಿ ದುರ್ಮರಣ ಹೊಂದಿದ್ದಾಳೆ ಎನ್ನಲಾಗಿದೆ. ಅಥಣಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.