ಚಿಕ್ಕೋಡಿ – ನ್ಯಾಯಕ್ಕಾಗಿ ಠಾಣೆಗೆ ಬಂದ ಮಹಿಳೆ ಜೊತೆ ಅಸಭ್ಯ ವರ್ತನೆ ; ಪಿಎಸ್ಐ ಅಮಾನತು
ಸಂಕೇಶ್ವರ :ಮಹಿಳೆಯ ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಪ್ರಕರಣದಲ್ಲಿ ಕರ್ತವ್ಯ ಲೋಪದಡಿ ಸಿಪಿಐ ಅಮಾನತ್ತು ಮಾಡಲಾಗಿದ್ದ ಪ್ರಕರಣ ಕಣ್ಣುಂದೆ ಇರುವಾಗಲೆ, ಮಹಿಳೆಯೊಂದಿಗೆ ದುರ್ನಡತೆ ಆರೋಪದಡಿ ಪಿಎಸ್ಐ ಅಮಾನತ್ತಾದ ಘಟನೆ ಜಿಲ್ಲೆಯ ಸಂಕೇಶ್ವರದಲ್ಲಿ ನಡೆದಿದೆ.
ಮಹಿಳೆಯೋರ್ವಳಿಗೆ ಕಿರುಕುಳ ಆರೋಪದಡಿ ಮಹಿಳೆಯ ದೂರಿನ ಮೆರೆಗೆ ಸಂಕೇಶ್ವರ ಪೊಲೀಸ್ ಠಾಣೆಯ ಪಿಎಸ್ಐ ನರಸಿಂಹರಾಜು ಜೆ. ಡಿ. ಅವರನ್ನು ಅಮಾನತು ಮಾಡಿ ಬೆಳಗಾವಿ ಜಿಲ್ಲಾ ಎಸ್ಪಿ ಭೀಮಾಶಂಕರ ಗುಳೇದ್ ಆದೇಶ ಹೊರಡಿಸಿದ್ದಾರೆ. ಕರ್ತವ್ಯ ಲೋಪ,ಅಶಿಸ್ತು ಹಾಗೂ ದುರ್ನಡೆಯನ್ನು ಆಧರಿಸಿ ಅವರನ್ನು ಅಮಾನತು ಮಾಡಲಾಗಿದೆ.
ಕಳೆದ ಹಲವು ದಿನಗಳ ಹಿಂದೆ ಸಂಕೇಶ್ವರ ಪೊಲೀಸ ಠಾಣೆಗೆ ತಮ್ಮ ಕೌಟುಂಬಿಕ ಸಮಸ್ಯೆ ಕುರಿತು ತಮ್ಮ ಪತಿಯ ವಿರುದ್ಧ ದೂರು ನೀಡಿದ್ದ ಮಹಿಳೆಗೆ ನ್ಯಾಯ ಕೊಡಿಸಬೇಕಿದ್ದ ಪೊಲೀಸ ಅಧಿಕಾರಿ ಪಿಎಸ್ ಐ ನರಸಿಂಹರಾಜು ಜೆ.ಡಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ.ಅವಳ ದೂರವಾಣ ಸಂಖ್ಯೆ ಪಡೆದು ಅವಳ ಸಂಪರ್ಕ ಬೆಳೆಸಿ ಅವಳನ್ನ ಕರೆದುಕೊಂಡು ತಿರುಗಾಡಿದ್ದಾರೆ.
ಪತಿ ಪತ್ನಿ ಕೌಟುಂಬಿಕ ಜಗಳದಲ್ಲಿ ನ್ಯಾಯ ಕೊಡಿಸಬೇಕಿದ್ದ ಪಿಎಸ್ ಐ ಮಹಿಳೆಯ ಗಂಡನನ್ನೆ ಬೆದರಿಸಿದ್ದಾರೆ ಎಂದು ನೊಂದ ಮಹಿಳೆ ನ್ಯಾಯಕ್ಕಾಗಿ, ಪಿಎಸ್ ಐ ಅವರ ವರ್ತನೆಗೆ ಬೆಸತ್ತ ಮಹಿಳೆ ನ್ಯಾಯ ಕೊಡಿಸುವಂತೆ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾಳೆ.
ಮಹಿಳೆಯ ದೂರಿನನ್ವಯ ವಿಚಾರಣೆ ನಡೆಸಿದ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಗಳು ಪಿಎಸ್ ಐ ನರಸಿಂಹರಾಜು ಅವರನ್ನ ಕರ್ತವ್ಯ ಲೋಪ,ಮಹಿಳೆಯೊಂದಿಗೆ ದುರ್ನಡತೆ ಹಾಗು ಅಶಿಸ್ತು ಎಂದು ನರಸಿಂಹರಾಜು ಅವರನ್ನ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.
ಸಂಕೇಶ್ವರ ಪೊಲೀಸ ಠಾಣೆಯ ಪಿಎಸ್ ಐ ಒಬ್ಬರು ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ ಅಮಾನತ್ತಾಗಿದ್ದು ಮೊದಲ ಪ್ರಕರಣವಾಗಿದ್ದೆ.ನ್ಯಾಯ ಕೊಡಿಸುವ ಪೊಲೀಸರೆ ಕಾನೂನು ಮರೆತರೆ ಸಮಾಜದ ನೊಂದ,ಅನ್ಯಾಯಕೊಳ್ಳಗಾದ ಸಂತ್ರಸ್ತರು ಯಾರ ಬಳಿ ಹೋಗುವುದು ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ.


