ಚಿಕ್ಕೋಡಿ : ಮೂರು ಮಕ್ಕಳಿರುವ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಯುವಕನನ್ನು ಮಹಿಳೆ ಗಂಡ ಹಾಗೂ ಸಂಬಂಧಿಕರು ಮರಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ತಾಲೂಕಿನ ಯಕ್ಸಂಬಾ ಪಟ್ಟಣದ ಅಕ್ಷಯ್ ಕಲ್ಲಟಗಿ ಹಲ್ಲೆಗೊಳಗಾದ ವ್ಯಕ್ತಿ. ಮೂರು ಮಕ್ಕಳಿರುವ ಮಹಿಳೆ ಜೊತೆಗೆ ಈತ ಅನೈತಿಕ ಸಂಬಂಧ ಹೊಂದಿದ್ದ. ಮಹಿಳೆ ಭೇಟಿಗೆ ಅವರ ಮನೆಗೆ ಹೋಗುವ ವೇಳೆ ಥಳಿಸಲಾಗಿದೆ.

ಈತನ ಅನೈತಿಕ ಸಂಬಂಧದ ಕುರಿತು ಮಹಿಳೆ ಪತಿಗೆ ತಿಳಿದಿದೆ. ಯುವಕ ಆಕೆಯ ಭೇಟಿಗೆ ಹೋಗುವ ಸಂದರ್ಭದಲ್ಲಿ ರಸ್ತೆ ಮಧ್ಯೆ ಹಿಡಿದು ಮರಕ್ಕೆ ಕಟ್ಟಿ ಹೊಡೆಯಲಾಗಿದೆ.

ಗಂಭೀರವಾಗಿ ಗಾಯಗೊಂಡ ಯುವಕ ಚಿಕ್ಕೋಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ‌.ಚಿಕ್ಕೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.