ಗ್ರಾಮ ಪಂಚಾಯತಿ ಅಧ್ಯಕ್ಷೆಗೆ I LOVE U ಎಂದ ಪಿಡಿಒ ; ಪ್ರಕರಣ ದಾಖಲು
ಚಿಕ್ಕಬಳ್ಳಾಪುರ : ಗ್ರಾಮ ಪಂಚಾಯತಿ ಅಧ್ಯಕ್ಷೆಗೆ ಅದೇ ಪಂಚಾಯತಿ ಪಿಡಿಒ ಐ ಲವ್ ಯು ಎಂದು ಮೆಸೇಜ್ ಹಾಕಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ರಾಶ್ಚೆರುವು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇವತಿ ಎಂಬುವವರಿಗೆ ಅದೇ ಗ್ರಾಮದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಐ ಲವ್ ಯು ಎಂದು ಅಶ್ಲೀಲ ಮೆಸೇಜ್ ಹಾಕಿದ್ದಾನೆ.
ಈಗಾಗಲೇ ಗ್ರಾಮ ಪಂಚಾಯಿತಿ ಅಧ್ಯಕ್ಷೆಗೆ ಮದುವೆಯಾಗಿದೆ. ಅಲ್ಲದೇ ಪಿಡಿಓ ಆಗಿರೋ ಅಶೋಕ್ಗೂ ಮದುವೆಯಾಗಿದೆ. ಅಲ್ಲದೇ ಗ್ರಾ. ಪಂ. ಅಧ್ಯಕ್ಷೆ ರೇವತಿಗೆ ಅಶ್ಲೀಲ ಮೆಸೇಜ್ ಹಾಗೂ ಖಾಲಿ ಚೆಕ್ಗಳಿಗೆ ಸಹಿ ಹಾಕುವಂತೆ
ಅಶೋಕ್, ಮಾಜಿ ಅಧ್ಯಕ್ಷೆ ನೀಲಾವತಿ ಪತಿ ಎ ಎನ್ ಬಾಬು ರೆಡ್ಡಿ, ಹಾಲಿ ಸದಸ್ಯ ನಾಗೇಶ್ ಹಾಗೂ ಭಾನು ಪ್ರಕಾಶ್ ಎಂಬುವವರಿಂದ ಬೆದರಿಕೆ ಹಾಗೂ ಜಾತಿ ನಿಂದನೆ ಆರೋಪ ಕೇಳಿ ಬಂದಿದೆ.
ನಾಲ್ವರ ವಿರುದ್ಧ ಚೇಳೂರು ಪೊಲೀಸ್ ಠಾಣೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇವತಿ ದೂರು ನೀಡಿದ್ದಾರೆ. ಈ ಸಂಬಂಧ ಚೇಳೂರು ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.


