ಏ ಬಾಸ್ ನಿನ್ನ ದಾದಾಗಿರಿ ಗೋಕಾಕ್ ನಲ್ಲಿ ಇಟ್ಕೊ : ರಮೇಶ್ ವಿರುದ್ಧ ಚನ್ನರಾಜ ವಾಗ್ದಾಳಿ
ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಹೊರಗಿನವರು ನಮ್ಮ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಭ್ರಷ್ಟಾಚಾರ ನಡೆದಿದೆ, ಅಭಿವೃದ್ಧಿ ಆಗಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ರಮೇಶ ಜಾರಕಿಹೊಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ ಗ್ರಾಮೀಣದಲ್ಲಿ ಅಭಿವೃದ್ಧಿ ಆಗಿಲ್ಲವೇ ? ಎಂದು ಜನರನ್ನೇ ಪ್ರಶ್ನಿಸಿದರು. ಜನರು ಆಗಿದೆ, ಆಗಿದೆ ಎಂದು ಕೂಗಿದರು. ಅಭಿವೃದ್ಧಿ ಆಗಿಲ್ಲ ಎನ್ನುವವರಿಗೆ ಬಹುಶಃ ಕಣ್ಣು ಕಾಣಿಸುತ್ತಿಲ್ಲ. ಹೋಗಿ ಕಣ್ಣು ತಪಾಸಣೆ ಮಾಡಿಸಿಕೊಳ್ಳಿ. ನನ್ನ ಜತೆ ಬನ್ನಿ. ನಾವು ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕೆಲಸ ತೋರಿಸುತ್ತೇವೆ. ನಮ್ಮ ಬಗ್ಗೆ ವೈಯಕ್ತಿಕವಾಗಿ ಅಪಪ್ರಚಾರ ಮಾಡುತ್ತಿದ್ದೀರಿ. ನೀವು 100ಕೋಟಿ ರೂ.ಗೆ ಮಾರಾಟವಾಗಿ ನೀವು ನಮಗೆ ಭ್ರಷ್ಟಾಚಾರ ಮಾತನಾಡುತ್ತಿದ್ದೀರಾ? ನಮ್ಮ ಕ್ಷೇತ್ರದಲ್ಲಿ ನಿಮ್ಮ ಗೂಂಡಾಗಿರಿ, ದಾದಾಗಿರಿ ನಡೆಯುವುದಿಲ್ಲ.ನಿಮ್ಮ ಗೂಂಡಾಗಿರಿ ಗೋಕಾಕನಲ್ಲಿ ಇಟ್ಟುಕೊಳ್ಳಿ ಎಂದು ರಮೇಶ ಜಾರಕಿಹೊಳಿಗೆ ಟಾಂಗ್ ನೀಡಿದರು. ಈ ಬಾರಿ ಮತ್ತೆ ಲಕ್ಷ್ಮೀ ಹೆಬ್ಬಾಳ್ಕರ್ ಶಾಸಕರಾಗಿ ಆಯ್ಕೆಯಾಗುತ್ತಾರೆ ಎಂದರು.
ಈ ಸಂದರ್ಭದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ಜಮೀರ್ ಅಹಮ್ಮದ್. ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ, ಮಾಜಿ ಶಾಸಕ ಅಶೋಕ ಪಟ್ಟಣ, ಎಂ.ಎಚ್.ಕೋನರೆಡ್ಡಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಚಿಕ್ಕೋಡಿ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಇನ್ನಿತರರು ವೇದಿಕೆಯಲ್ಲಿದ್ದರು.