Select Page

Advertisement

ನಿಖಿಲ್ ಸೋತರು ಪರವಾಗಿಲ್ಲ ಸ್ಪರ್ಧಿಸಲಿ ; ದೇವೇಗೌಡರ ಸೂಚನೆ

ನಿಖಿಲ್ ಸೋತರು ಪರವಾಗಿಲ್ಲ ಸ್ಪರ್ಧಿಸಲಿ ; ದೇವೇಗೌಡರ ಸೂಚನೆ

ಬೆಂಗಳೂರು : ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್ ಸೋತರು ಪರವಾಗಿಲ್ಲ ಆದರೆ ಸ್ಪರ್ಧೆ ಮಾಡಲಿ ಎಂದು ಕುಮಾರಸ್ವಾಮಿ ಅವರಿಗೆ ಮಾಜಿ ಪ್ರಧಾನಿ ದೇವೇಗೌಡರು ಸೂಚನೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನು‌ ಕಣಕ್ಕಿಳಿಸುವ ಅನಿವಾರ್ಯ ಇದ್ದು, ಸಧ್ಯ ಬಿಜೆಪಿ ಮಾಜಿ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ತಲೆನೋವು ತರಿಸಿದೆ. ಇತ್ತ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಹೋರಾಟ ನಡೆಯಲಿದ್ದು ದೇವೇಗೌಡರ ಸೂಚನೆ ಮಹತ್ವದ ಪಾತ್ರವಹಿಸಲಿದೆ.

ಈಗಾಗಲೇ ಮಂಡ್ಯ ಲೋಕಸಭಾ ಹಾಗೂ ರಾಮನಗರ ವಿಧಾನಸಭಾ ಸೋಲಿನಿಂದ ಕಂಗೆಟ್ಟಿರುವ ನಿಖಿಲ್ ಕುಮಾರಸ್ವಾಮಿಗೆ ಮತ್ತೊಂದು ಉಪ‌ ಚುನಾವಣೆ ಸ್ಪರ್ಧಿಸಬೇಕಾದ ಅನಿವಾರ್ಯತೆ ಬಂದೊದಗಿದೆ. ಈ ಮಧ್ಯೆ ದೇವೇಗೌಡರ ನಿರ್ಧಾರ ಅಂತಿಮ ಆಗಲಿದ್ದು, ನಿಖಿಲ್ ಕಣಕ್ಕೆ ಇಳಿಯುವುದು ಅನಿವಾರ್ಯವಾಗಬಹುದು.

Advertisement

Leave a reply

Your email address will not be published. Required fields are marked *

error: Content is protected !!