Select Page

Advertisement

ಬೆಳಗಾವಿಗೆ ಬರದೆ ಕಬ್ಬಿನ ಗದ್ದೆ ಸೇರಿದ ಬಸ್ ; ಚಾಲಕನಿಗೊಂದು ಸಲಾಂ

ಬೆಳಗಾವಿಗೆ ಬರದೆ ಕಬ್ಬಿನ ಗದ್ದೆ ಸೇರಿದ ಬಸ್ ; ಚಾಲಕನಿಗೊಂದು ಸಲಾಂ

ಕಾಗವಾಡ : ವಿಜಯಪೂದಿಂದ ಬೆಳಗಾವಿಗೆ ಹೊರಟ್ಟಿದ್ದ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ನ ಫಾಟಾ ತುಂಡಾಗಿ, ಚಾಲಕನ ನಿಯಂತ್ರಣ ತಪ್ಪಿ ತಾಲೂಕಿನ ನವಲಿಹಾಳ ಬಳಿ ಕಬ್ಬಿನ ಗದ್ದೆಗೆ ನುಗಿದ್ದು, ಬಸ್‌ನಲ್ಲಿದ್ದ ಕೆಲ ಪ್ರಯಾಣ ಕರಿಗೆ ಸಣ್ಣ-ಪುಟ್ಟ ಗಾಯಗಳಾಗಿರುವ ಘಟನೆ ಗುರುವಾರ ಮಧ್ಯಾಹ್ನ ಸಂಭವಿಸಿದೆ.

ವಿಜಯಪೂರದಿಂದ ಅಥಣಿ ಮಾರ್ಗವಾಗಿ ಬೆಳಗಾವಿಗೆ ಹೋರಟಿದ್ದ ಬಸ್ಸಿನಲ್ಲಿ ಸುಮಾರು 55 ಜನ ಪ್ರಯಾಣಿಕರು ಸಂಚರಿಸುತ್ತಿದ್ದರು. ಬಸ್ ಕಾಗವಾಡ ತಾಲೂಕಿನ ನವಲಿಹಾಳ ಬಳಿ ಬಂದಾಗ ಬಸ್ಸಿನ ಫಾಟಾ ತುಂಡಾಗಿದೆ.

ಕೂಡಲೇ ಚಾಲಕ ಬಸ್ ನಿಯಂತ್ರಿಸಲು ಪ್ರಯತ್ನಿಸಿ, ಕಬ್ಬಿನ ಗದ್ದೆಗೆ ನುಗ್ಗಿಸಿ, ಭಾರಿ ಅನಾಹುತವನ್ನು ತಪ್ಪಿಸಿದ್ದಾನೆ. ಗಾಯಾಳುಗಳನ್ನು ಅಥಣಿ ಹಾಗೂ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಗವಾಡ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ಸಂಭವಿಸಿದ್ದು, ಸ್ಥಳಕ್ಕೆ ಪಿಎಸ್‌ಐ ಜಿ.ಜಿ. ಬಿರಾದರ ಭೇಟ್ಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!