ಅಥಣಿ : ಹವಾಮಾನ ವೈಪರೀತ್ಯಗಳಿಂದ ದ್ರಾಕ್ಷಿ ಬೆಳೆಗೆ ಹಾನಿಯಾದ ಹಿನ್ನಲೆಯಲ್ಲಿ ರೈತನೋರ್ವ ಲಕ್ಷಾಂತರ ಬೆಲೆ ಬಾಳುವ ದ್ರಾಕ್ಷಿ ಬೆಳೆಯನ್ನು ನಾಶಪಡಿಸಿದ ಘಟನೆ ಅಥಣಿ ತಾಲೂಕಿನಲ್ಲಿ ನಡೆದಿದೆ.
ಅಥಣಿ ತಾಲೂಕಿನ ತೆಲಸಂಗ ಗ್ರಾಮದ ರೈತ ಕಾಶೀಮಸಾಬ್ ಮುಜಾವರ್ ದ್ರಾಕ್ಷಿ ಬೆಳೆದಿದ್ದ. ಕಳೆದ ಮಾರ್ಚ್ ತಿಂಗಳಲ್ಲಿ ಮಳೆ ಅಭಾವದ ಮಧ್ಯೆ ಸಾಲ ಮಾಡಿ ಬೆಳೆಗೆ ನೀರಿನ ವ್ಯವಸ್ಥೆ ಮಾಡಿದ್ದರು. ಆದರೆ ಈಗ ಕೈಗೆ ಬಂದ ಬೆಳೆ ಅಕಾಲಿಕ ಮಳೆಯಂದ ಹಾನಿಯಾಗಿದೆ.
ಇತ್ತಿಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯಗಳಿಂದ ರೈತ ಬೇಸತ್ತು ತನ್ನ ದ್ರಾಕ್ಷಿ ಬೆಳೆಯನ್ನು ಕೊಡಲಿಯಿಂದ ಕಡಿದು ಆಕ್ರೋಶ ಹೊರಹಾಕಿದ್ದಾನೆ. ಸರ್ಕಾರ ನೀಡುವ ಬೆಳೆ ವೆಮೆಯಲ್ಲಿಯೂ ತಾರತಮ್ಯ ಮಾಡುವ ಹಿನ್ನಲೆಯಲ್ಲಿ ಈ ನಿರ್ಧಾರಕ್ಕೆ ಬಂದಿರುವೆ ಎಂದು ರೈತ ಬೆಳಗಾವಿ ವಾಯ್ಸ್ ಜೊತೆ ಅಳಲು ತೋಡಿಕೊಂಡರು.



