Select Page

Advertisement

ಬೆಳಗಾವಿ : ತುಂಬಿದ್ದ ಬಸ್ಸಿನಿಂದ ಕೆಳಗೆ ಬಿದ್ದ ಬಾಲಕಿ, ಶಕ್ತಿ ಯೋಜನೆ ವಿರುದ್ಧ  ಪೋಷಕರ ಆಕ್ರೋಶ

ಬೆಳಗಾವಿ : ತುಂಬಿದ್ದ ಬಸ್ಸಿನಿಂದ ಕೆಳಗೆ ಬಿದ್ದ ಬಾಲಕಿ, ಶಕ್ತಿ ಯೋಜನೆ ವಿರುದ್ಧ  ಪೋಷಕರ ಆಕ್ರೋಶ

ಬೆಳಗಾವಿ : ಕಳೆದ ಒಂದು ವಾರದಿಂದ ರಾಜ್ಯದಾದ್ಯಂತ ಆರಂಭವಾಗಿರುವ ಶಕ್ತಿ ಯೋಜನೆಗೆ ವ್ಯಾಪಕ ಸ್ಪಂದನೆ ದೊರೆಯುತ್ತಿದುದರ ನಡುವೆ ಕೆಲವು ಅವಾಂತರಗಳಿಗೆ ಈ ಯೋಜನೆ ಕಾರಣವಾಗಿ ಜನರ ಕೆಂಗಣ್ಣಿಗೆ ಗುರಿಯಾಗುತ್ತಿದೆ.

ರಾಮದುರ್ಗ ಬಸ್ ನಿಲ್ದಾಣದಲ್ಲಿ ಜನದಟ್ಟಣೆಯಿಂದ ತುಂಬಿದ್ದ ಬಸ್ಸಿನಿಂದ ಬಾಲಕಿಯೋರ್ವಳು ಕೆಳಕ್ಕೆ ಬಿದ್ದ ಘಟನೆ ನಡೆದಿದೆ. ರಾಮದುರ್ಗದಿಂದ ಹುಬ್ಬಳ್ಳಿ, ಧಾರವಾಡ ಮಾರ್ಗವಾಗಿ ಸಂಚರಿಸುತ್ತಿದ್ದ ಬಸ್ಸು ಅಮಾವಾಸ್ಯೆಯ ಹಿನ್ನೆಲೆಯಲ್ಲಿ ಫುಲ್ ರಶ್ ಆಗಿದ್ದರಿಂದ ಮಹಿಳೆಯರು ತೀರ್ಥಕ್ಷೇತ್ರಗಳಿಗೆ ತೆರಳುತ್ತಿರುವುದರಿಂದ ಮಹಿಳಾಮಣಿಗಳಿಂದಲೇ ತುಂಬಿ ತುಳುಕುತ್ತಿದ್ದ ಬಸ್ಸಿನಲ್ಲಿ ಮಹಿಳೆಯರು ಸೀಟ್ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ತಮ್ಮ ಮಗಳು ಬಸ್ಸಿನಿಂದ ಕೆಳಗೆ ಬಿದ್ದ ಬಗ್ಗೆ ಬಸ್ ಚಾಲಕನ ಮೇಲೆ ಆಕ್ರೋಶಗೊಂಡ ಬಾಲಕಿಯ ಪೋಷಕರು ಅವ್ಯಾಚ್ಚ ಶಬ್ದಗಳಿಂದ ನಿಂದಿಸಿ, ಫ್ರೀ ಬಸ್ ಯೋಜನೆಯ ವಿರುದ್ಧ ಕೆಂಡ ಕಾರಿದ್ದಲ್ಲದೆ ತಕ್ಷಣವೇ ಈ ಯೋಜನೆಯನ್ನು ಹಿಂಪಡೆದು ಮೊದಲಿನಂತೆಯೇ ಸೇವೆ ನೀಡಲು ಆಗ್ರಹಿಸಿದರು.

Advertisement

Leave a reply

Your email address will not be published. Required fields are marked *

error: Content is protected !!