ಅಥಣಿ : ಕೊಕಟನೂರ ಬಳಿ ಉರುಳಿ ಬಿದ್ದ ಸರ್ಕಾರಿ ಬಸ್
ಅಥಣಿ : ಬ್ರೇಕ್ ಹಾಳಾದ ಹಿನ್ನಲೆಯಲ್ಲಿ ಸರ್ಕಾರಿ ಬಸ್ ಒಂದು ಹಳ್ಳದ ದಂಡೆಗೆ ಉರುಳಿಬಿದ್ದ ಘಟನೆ ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ನಡೆದಿದೆ.
ಸುಮಾರು 35 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಅಥಣಿ ಘಟಕದ ಸರ್ಕಾರಿ ಬಸ್ ಬ್ರೇಕ್ ಹಾಳಾದ ಹಿನ್ನಲೆಯಲ್ಲಿ ಕೊಕಟನೂರ ಹಳ್ಳದ ಪಕ್ಕ ಬಿದ್ದಿದೆ. ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆ ದಾಖಲಿಸಿದಲಾಗಿದೆ. ಐಗಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.