Select Page

Advertisement

Bigg Boss Kannada 11 : ಈ ವಾರ ಬಿಗ್ ಬಾಸ್ ಮನೆಯಿಂದ ಮಹಿಳಾ‌ ಸ್ಪರ್ಧಿಗೆ ಗೇಟ್ ಪಾಸ್….?

Bigg Boss Kannada 11 : ಈ ವಾರ ಬಿಗ್ ಬಾಸ್ ಮನೆಯಿಂದ ಮಹಿಳಾ‌ ಸ್ಪರ್ಧಿಗೆ ಗೇಟ್ ಪಾಸ್….?

ಬೆಂಗಳೂರು : ಮೊದಲವಾರವೇ ತೀವ್ರ ಕುತೂಹಲ ಮೂಡಿಸಿದ್ದ ಬಿಗ್ ಬಾಸ್ ಮನೆಯ ನೋಡುಗರಿಗೆ ಸಖತ್ ಮಜಾ ಕೊಡುತ್ತಿದೆ. ಈ ಮಧ್ಯ ಕಿಚ್ಚನ ಪಂಚಾಯತಿ ಕೂಡಾ ಬಂದಿದೆ. ಅದರಲ್ಲಿ ಈಗಾಗಲೇ ನಾಮಿನೆಟ್ ಆದ ಮೂವರನ್ನು ಸೇಫ್ ಮಾಡಿದ್ದು ಇನ್ನುಳಿದವರಲ್ಲಿ ಯಾರು ಹೊರ ಹೋಗುತಗತಾರೆ ಎಂಬ ಚರ್ಚೆ ನಡೆಯುತ್ತಿದೆ.

ಮೊದಲ ವಾರದ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಅವಾಂತರ ನಡೆದವು ಸ್ಪರ್ಧಿ ವಕೀಲ ಜಗದೀಶ್ ಮಾತ್ರ ಅನೇಕ ವಿಚಾರದಲ್ಲಿ ಮನೆಯ ಕೇಂದ್ರ ಬಿಂದು ಆಗಿದ್ದಾರೆ. ಆದರೆ ವಾರದ ಕಿಚ್ಚನ ಪಂಚಾಯತಿಯಲ್ಲಿ ಸುದೀಪ್ ಲಾಯರ್ ಜಗದೀಶ್ ಮಾಡಿದ್ದ ತಪ್ಪುಗಳಿಗೆ ಸರಿಯಾದ ಪಾಠವನ್ನು ಹೇಳಿದ್ದಾರೆ.

ಆದರೆ ಈ ಬಾರಿ ಬಿಗ್ ಬಾಸ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿ ಗಮನಸೆಳೆದಿದ್ದ ಲಾಯರ್ ಬಿಗ್ ಬಾಸ್ ಅವರನ್ನು ಹೊರ ಕಳಿಸಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ‌ ಅನೇಕರು ಆಗ್ರಹಿಸಿದ್ದರು. ಆದರೆ ಈ ಬಾರಿ ಮನೆಯಿಂದ ಹೊರ ಹೋಗುವುದರಿಂದ ಲಾಯರ್ ಜಗದೀಶ್ ಬಚಾವ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೊಂದೆಡೆ ಈ ಬಾರಿ ಬಿಗ್‌ಬಾಸ್‌ ಮನೆಯಿಂದ ಯಾರು ಹೊರಹೋಗುತ್ತಾರೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ಇಬ್ಬರು ಮಹಿಳಾ ಕಂಟೆಸ್ಟೆಂಟ್‌ಗಳ ಹೆಸರು ಕೇಳಿಬಂದಿದ್ದು, ಅನುಷಾ ರೈ ಅಥವಾ ಮೋಕ್ಷಿತಾ ಪೈ ಹೊರಬೀಳಬಹುದು ಎಂದು ಹೇಳಲಾಗುತ್ತಿದೆ.

ಇನ್ನು ಈ ಇಬ್ಬರಲ್ಲಿ ಮೋಕ್ಷಿತಾ ಪೈ ಅವರು ಔಟ್‌ ಆಗುತ್ತಾರೆ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ದಸರಾ ಶುಭಸಂದರ್ಭದಲ್ಲಿ ಸ್ಪರ್ಧಿಗಳಿಗೆ ಸಿಹಿಸುದ್ದಿ ನೀಡಿ ಈ ಬಾರಿ ಎಲಿಮಿನೇಷನ್‌ ಇರಲ್ಲ ಎಂದೂ ಹೇಳಲಾಗುತ್ತಿದೆ.

ಒಟ್ಟಿನಲ್ಲಿ ಬಿಗ್ ಬಾಸ್ 11 ಮೊದಲ ವಾರದಲ್ಲೇ ಸಖತ್ ಮಜಾ ಪಡೆದಿಕೊಂಡು ಮುಂದೆ ಸ್ಪರ್ಧಿಗಳು ಹೇಗೆಲ್ಲ ತಮ್ಮ ಪ್ರತಿಭೆ ತೋರಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.

Advertisement

Leave a reply

Your email address will not be published. Required fields are marked *

error: Content is protected !!