ಬಿಗ್ ಬಾಸ್ ಗೆ ನಟ ಕಿಚ್ಚ ಸುದೀಪ್ ವಿದಾಯ ; ಕಾರಣವಾಯ್ತಾ ಈ ವಿಷಯ….!
ಬೆಂಗಳೂರು : ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ನಡೆದುಬಂದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಕಾರ್ಯಕ್ರಮ ಸಧ್ಯ ಹನ್ನೊಂದನೇ ವರ್ಷಕ್ಕೆ ಕಾಲಿಟ್ಟಿದೆ. ಆದರೆ ಈ ಮಧ್ಯೆ ಕೆಲ ಬೆಳವಣಿಗೆಗಳು ಶೋ ಅಭಿಮಾನಿಗಳನ್ನು ನೋವಿಗೆ ತಳ್ಳಿವೆ.
ಕನ್ನಡದ ಖ್ಯಾತ ರಿಯಾಲಿಟಿ ಶೋ ಗಳಲ್ಲಿ ಒಂದಾಗಿರುವ ಬಿಬ್ ಬಾಸ್ ( Bigg boss Kannada 11 ) ಸಧ್ಯ ಭರ್ಜರಿ ಆರಂಭ ಕಂಡಿದೆ. ಇನ್ನೂ ಖ್ಯಾತ ನಟ ಕಿಚ್ಚ ಸುದೀಪ್ ಇಷ್ಟು ವರ್ಷಗಳ ಕಾಲ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದು ಈ ಬಾರಿ ಅದು ಅಂತ್ಯವಾಗಲಿದೆ. ಇದೇ ಅವರ ಕೊನೆಯ ಬಿಗ್, ಬಾಸ್ ಶೋ ಆಗಲಿದೆ.
ಹೌದು ಈ ಕುರಿತು ಸುದೀಪ್ ( kiccha sudeep ) ಅವರು ಅಧಿಕೃತವಾಗಿ ಮಾಹಿತಿ ನೀಡಿದ್ದು ಇದೇ ನನ್ನ ಕೊನೆಯ ಬಿಗ್ ಬಾಸ್ ಶೋ ಎಂದು ಎಕ್ಸ್ ನಲ್ಲಿ ಟ್ವಿಟ್ ಮಾಡಿದ್ದಾರೆ. ಇದರಿಂದ ಇಷ್ಟು ದಿನಗಳ ಕಾಲ ರಿಯಾಲಿಟಿ ಶೋ ನಲ್ಲಿ ಮನರಂಜನೆ ನೀಡುತ್ತಿದ್ದ ಸುದೀಪ್ ಮುಂದಿನ ವರ್ಷದಿಂದ ಕಾಣಸಿಕೊಳ್ಳುವುದಿಲ್ಲ.
ಅಷ್ಟಕ್ಕೂ ಸುದೀಪ್ ಅವರ ಈ ನಿರ್ಧಾರದ ಹಿಂದೆ ಅನೇಕ ಕಾರಣಗಳಿವೆ. ಬರಬರುತ್ತ ಹೊರಗಿನ ಜನ ಬಿಗ್ ಬಾಸ್ ಕಾರ್ಯಕ್ರಮವನ್ನು ತೀರಾ ವೈಯಕ್ತಿಕ ಮಟ್ಟಕ್ಕೆ ತಗೆದುಕೊಂಡು ಹೋಗುತ್ತಿದ್ದಾರೆ. ಇದರಿಂದ ಕೆಲವು ವಿಷಯಕ್ಕೆ ವಿನಾಕಾರಣ ಹಸ್ತಕ್ಷೇಪ ನಡೆಸುದ್ದು ಕಿಚ್ಚ ಹೊರಬರಲು ಕಾರಣ ಇರಬಹುದು.
ಮೊನ್ನೆ ಅಷ್ಟೇ ಸ್ವರ್ಗ ಹಾಗೂ ನರಕ ಎಂಬ ಹೊಸ ಅಧ್ಯಾಯವನ್ನು ಪ್ರಾರಂಭ ಮಾಡಲಾಗಿತ್ತು. ಆದರೆ ಮಾನವ ಹಕ್ಕುಗಳ ಆಯೋಗದಿಂದ ಕಾರ್ಯಕ್ರಮ ಆಯೋಜಕರಿಗೆ ನೋಟಿಸ್ ನೀಡಿದ್ದರು. ಇದರಿಂದ ಆ ಒಂದು ಸ್ವರ್ಗ, ನರಕ ಎಂಬುದನ್ನೇ ಕೈಬಿಡಲಾಗಿದೆ.
ಒಟ್ಟಿನಲ್ಲಿ ಕಳೆದ ಹನ್ನೊಂದು ವರ್ಷಗಳಿಂದ ನಟ ಸುದೀಪ್ ಅವರು ಜನರನ್ನು ಮನರಂಜಿಸಿದ ರೀತಿ ಅದ್ಬುತ. ಜೊತೆಗೆ ತಮ್ಮ ನೇರ ಮಾತುಗಳಿಂದ ಬಿಗ್ ಬಾಸ್ ಕಾರ್ಯಕ್ರಮವನ್ನು ಹೆಚ್ಚಿನ ಜನರಿಗೆ ತಲುಪಿಸಿದ ರೀತಿ ಅದ್ಬುತ. ಈ ಬಾರಿ ನಡೆಯುವ ಕಾರ್ಯಕ್ರಮ ಸುದೀಪ್ ಅವರು ಭಾಗವಹಿಸುವ ಕೊನೆಯ ಕಾರ್ಯಕ್ರಮ ಇದಾಗಲಿದೆ.


