ನವದೆಹಲಿ : ಸಪ್ಟೆಂಬರ್ 13 ರಿಂದ‌ 19 ರ ವರೆಗೆ ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಲ್ಲಿ ನಡೆಯಲಿರುವ 69ನೇ ಕಾಮನ್ವೆಲ್ತ್ ಸಂಸದೀಯ ‌ಸಮ್ಮೇಳನ ಅಂಗವಾಗಿ ಮಂಗಳವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜ್ಯ ವಿಧಾಸಭೆ ಸಭಾಧ್ಯಕ್ಷ ಜಿ.ಎಸ್ ಪಾಟೀಲ್ ಭಾಗವಹಿಸಿದ್ದರು.

ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ‌ಸಂಸದೀಯ ವ್ಯವಹಾರ ಹಾಗೂ ಸಂಪ್ರದಾಯ ಮತ್ತು ಮುಂಬರುವ ಸಂಸದೀಯ ಸಮ್ಮೇಳನ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಈ ವೇಳೆ ಸಂಸದೀಯ ವ್ಯವಸ್ಥೆಗಳ ಬಲವರ್ಧನೆ,‌ ಪ್ರಜಾಪ್ರಭುತ್ವ ಮೌಲ್ಯಗಳ ಸಂರಕ್ಷಣೆ ಹಾಗೂ ಕಾಮನ್ವೆಲ್ತ್ ರಾಷ್ಟ್ರಗಳ ನಡುವಿನ ಸಂಸದೀಯ ವ್ಯವಹಾರ ಬಲಪಡಿಸುವ ನಿಟ್ಟಿನಲ್ಲಿ ಸಮ್ಮೇಳನದ ಮಹತ್ವದ ಕುರಿತು ಚರ್ಚೆ ನಡೆಸಲಾಯಿತು.

ಈ ವೇಳೆ ರಾಜ್ಯಸಭಾ ಉಪ ಸಭಾಪತಿ ಹರಿವಂಶ ನಾರಾಯಣ್ ಸಿಂಗ್, ಕರ್ನಾಟಕ ವಿಧಾನ ಪರಿಷತ್ ಸಭಾಪತಿ‌ ಸಲೀಂ ಅಹಮ್ಮದ್ ಹಾಗೂ ವಿವಿಧ ರಾಜ್ಯಗಳ ಸಭಾಪತಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.