ಬಾಳು ಕೊಡುವುದಾಗಿ ಹೇಳಿ ಕೈ ಕೊಟ್ಟ ಪೋಲಿಸಪ್ಪ : ರಾಯಬಾಗ ಪೇದೆ ಮೇಲೆ ವಂಚನೆ ಪ್ರಕರಣ
ಬೆಳಗಾವಿ : ಬೆಂಗಳೂರು ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿರುವ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಗ್ರಾಮದ ಆನಂದ ಪಾಟೀಲ ವಿರುದ್ಧ ನಂಬಿಕೆ ದ್ರೋಹ ಹಾಗೂ ವಂಚನೆ ಮಾಡಿದ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಇಲಾಖೆಯ ಕಾರ್ಯದ ನಿಮಿತ್ತವಾಗಿ ಠಾಣೆಯ ಮಹಿಳಾ ಪೇದೆಯೊಂದಿಗೆ ಕರೆ ಮಾಡಿ ಮಾತನಾಡಿದ್ದಾನೆ. ನಂತರದ ದಿನಗಳಲ್ಲಿ ಇವರಿಬ್ಬರ ನಡುವೆ ವಾಟ್ಸಾಪ್ ಮೆಸೇಜ್, ವಿಡಿಯೋ ಕಾಲ್ ಮೂಲಕ ಸಲುಗೆ ಆರಂಭವಾಗಿದೆ.
ಬಳಿಕ ಆನಂದ ಪಾಟೀಲ ಮಹಿಳಾ ಪೇದೆಯೊಂದಿಗೆ ಮಾತನಾಡಿ ನಿನ್ನನ್ನು ಪ್ರೀತಿಸುವುದಾಗಿ ತಿಳಿಸಿದ್ದಾನೆ. ಪೇದೆಯ ಬಣ್ಣದ ಮಾತಿಗೆ ಮರುಳಾದ ಮಹಿಳಾ ಪೇದೆ ಇತನೊಂದಿಗೆ ಎಲ್ಲೆಂದರಲ್ಲಿ ಸುತ್ತಾಡಿದ್ದಾನೆ. ಮದುವೆಯಾಗುವುದಾಗಿ ದೈಹಿಕ ಸಂಪರ್ಕವನ್ನು ಬೆಳೆಸಿದ್ದಾನೆ.
ನಂತರ ಮಹಿಳಾ ಪೇದೆ ಮದುವೆ ವಿಷಯವನ್ನು ಪ್ರಸ್ತಾಪಿಸಿದಾಗ ನಾನು ಕೇವಲ ಸ್ನೇಹಿತ ಎಂದು ಭಾವಿಸಿದ್ದೇನೆ. ಪ್ರೀತಿಸುವುದಾಗಿ ಹೇಳಿಲ್ಲ, ನಾನು ಗಂಡಸು ಸಾವಿರ ರುಪಾಯಿ ಹಣ ಕೊಟ್ಟು ಎರಡು ಗಂಟೆ ಅನುಭವಿಸುತ್ತೇನೆ ಎಂದು ಪೋನ್‌ನಲ್ಲಿ ತಿಳಿಸಿದ್ದಾನೆ.
ಇದರಿಂದಾಗಿ ಮನನೊಂದ ಮಹಿಳಾ ಪೇದೆ ಪೊಲೀಸ್ ಪೇದೆ ಆನಂದ ಪಾಟೀಲ ವಿರುದ್ಧ ಪ್ರಕರಣ ದಾಖಲಿಸಿದ್ದಾಳೆ.



