ಗಾಂಜಾ ಗುಂಗಲ್ಲಿ ಹೊಡೆದಾಟ ; ಕಣ್ಮುಂದೆ ಸಹೋದರನ ಸಾವು
ಬೆಳಗಾವಿ : ಗಾಂಜಾ ಸೇವಿಸುವ ವಿಚಾರವಾಗಿ ಸಹೋದರರ ಮಧ್ಯೆ ಜಗಳ ಉಂಟಾಗಿ ಓರ್ವ ಸಾವಣಪ್ಪಿದ್ದು, ಇನ್ನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ನಿಲಜಿಯಲ್ಲಿ ನಡೆದಿದೆ.
ಬೆಳಗಾವಿ ತಾಲೂಕಿನ ನಿಲಜಿ ಗ್ರಾಮದ ನಿವಾಸಿಗಳಾದ ಸುಶಾಂತ ಪಾಟೀಲ್ ( 20 ) ಓಂಕಾರ ಪಟೀಲ್ ( 23 ) ಶುಕ್ರವಾರ ರಾತ್ರಿ ಮನೆಯ ಎರಡನೇ ಮಹಡಿಯಲ್ಲಿ ಗಾಂಜಾ ಸೇವಿಸುವ ಉದ್ದೇಶದಿಂದ ಗಲಾಟೆ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ತಳ್ಳಾಟದಲ್ಲಿ ಇಬ್ಬರೂ ಕೆಳಗೆ ಬಿದ್ದಿದ್ದು ಸುಶಾಂತ ಪಟೀಲ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಓಂಕಾರ ಪಾಟೀಲ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಬ್ಬರು ಸಹೋದರರು ಕಳೆದ ಕೆಲ ವರ್ಷಗಳಿಂದ ಗಾಂಜಾ ವ್ಯಸನಿಗಳಾಗಿದ್ದರು, ಅನೇಕಬಾರಿ ಸಹೋದರರ ತಂದೆ ಸುಭಾಷ್ ಪಟೀಲ್ ಮಕ್ಕಳಿಗೆ
ಬುದ್ದಿಮಾತು ಹೇಳಿದ್ದರು ಯಾವುದೇ ಪ್ರಯೋಜನವಾಗಿಲ್ಲ.
ಮನೆಯಲ್ಲಿ ಯವುದೇ ಕೆಲಸ ಮಾಡಿದೆ ದಿನನಿತ್ಯ ಜಗಳ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದರು. ಈ ಕುರಿತು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.