Select Page

Advertisement

ಲಕ್ಷಾಂತರ ಮೌಲ್ಯದ ಸಾರಾಯಿ ವಶ ; ಇಬ್ಬರ ಬಂಧನ

ಲಕ್ಷಾಂತರ ಮೌಲ್ಯದ ಸಾರಾಯಿ ವಶ ; ಇಬ್ಬರ ಬಂಧನ

ಬೆಳಗಾವಿ : ಗೋವಾ ರಾಜ್ಯದಿಂದ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಕಂಟೇನರ್ ಲಾರಿಯನ್ನು ವಶಕ್ಕೆ ಪಡೆದಿರುವ ಯಮಕನಮರಡಿ ಪೊಲೀಸರು ಲಾರಿಯಲ್ಲಿದ್ದ ಸುಮಾರು 28 ಲಕ್ಷ ಮೌಲ್ಯದ 16848 ಲೀಟರ್ ವಿವಿಧ ಬಗೆಯ ಮದ್ಯ ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿರುವ ಘಟನೆ ನಡೆದಿದೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ್ ಅವರು ತಿಳಿಸಿದ್ದಾರೆ.

ಶನಿವಾರ ಗೋವಾ ರಾಜ್ಯದಿಂದ ಆಂದ್ರಪ್ರದೇಶಕ್ಕೆ ಬೃಹತ್ತಾದ ಲಾರಿಯೊಂದರಲ್ಲಿ ಅಕ್ರಮವಾಗಿ ವಿವಿಧ ಬಗೆಯ ದುಬಾರಿ ಬೆಲೆಯ ಮದ್ಯವನ್ನು ಖಚಿತ ಮಾಹಿತಿ ಮೇರೆಗೆ ಯಮಕನಮರಡಿ ಪೊಲೀಸರು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಲಾರಿಯಲ್ಲಿ ಸುಮಾರು 28 ಲಕ್ಷ ಮೌಲ್ಯದ ಮದ್ಯ ಇದ್ದು ಇದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಈ ಲಾರಿ ಚಾಲಕ ಸೇರಿ ಇಬ್ಬರನ್ನು ಬಂಧಿಸಲಾಗಿದೆ.

ಅವರು ಹಾರ್ಡ್‌ವೇರ್ ಸಾಗಣೆಯ ಸುಳ್ಳು ದಾಖಲೆಗಳನ್ನು ಸಾಗಿಸುತ್ತಿದ್ದರು ಎನ್ನಲಾಗಿದೆ. ಈ ಕುರಿತು ಯಮಕನಮರಡಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂದಿನ ತನಿಖೆ ನಡೆಯುತ್ತಿದೆ ಎಂದು ಎಸ್ ಪಿ ಗುಳೇದ ಅವರು ತಿಳಿಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!