PuREPower & GridShift ಸೇರ್ಪಡೆ; ಸುಧಾರಿತ ಮತ್ತು ವಿಶ್ವಾಸಾರ್ಹ ಇಂಧನ ಸಂಗ್ರಹಣಾ ಪರಿಹಾರಗಳು ಈಗ ಕರ್ನಾಟಕದ ಗ್ರಾಹಕರಿಗೆ ಇನ್ನಷ್ಟು ಹತ್ತಿರ

ಬೆಳಗಾವಿ: ಕರ್ನಾಟಕದ ಬೆಳಗಾವಿ 590003ರಲ್ಲಿ ಹೊಸದಾಗಿ ನೇಮಕಗೊಂಡ ತನ್ನ ಅಧಿಕೃತ ವಿತರಕ ಮೆ. GridShift -DSPPKA0712 ម ជ ಮೂಲಕ PuREPower ಕರ್ನಾಟಕದಲ್ಲಿ ತನ್ನ ಉಪಸ್ಥಿತಿಯನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.

ಬೆಳಗಾವಿಯ ಗೋವಾವೇಸ್‌ನಲ್ಲಿ ಅಗ್ನಿಶಾಮಕ ದಳದ ಎದುರು ಇರುವ PURE Studioನಲ್ಲಿ ಆರಂಭವಾಗಿರುವ 1,000 ಚದರ ಅಡಿ ವಿಸ್ತೀರ್ಣದ ಅತ್ಯಾಧುನಿಕ ಶೋರೂಮ್, ಗ್ರಾಹಕರಿಗೆ ಉತ್ಕೃಷ್ಟ ಅನುಭವ ನೀಡುವ ಹಾಗೂ PuREPowerನ ಸುಧಾರಿತ ಇಂಧನ ಸಂಗ್ರಹಣಾ ಪರಿಹಾರಗಳು ಸುಲಭವಾಗಿ ದೊರೆಯುವಂತೆ ಮಾಡುವ ಉದ್ದೇಶದಿಂದ ವಿನ್ಯಾಸಗೊಂಡಿದೆ.

ಈ ಉದ್ಘಾಟನೆಯು ಭಾರತದಾದ್ಯಂತ PuREPower ಕೈಗೊಂಡಿರುವ ವಿಸ್ತರಣೆಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿದ್ದು, ಮನೆಗಳು, ಉದ್ಯಮಗಳು ಮತ್ತು ಕೈಗಾರಿಕೆಗಳಿಗೆ
ವಿಶ್ವಾಸಾರ್ಹ, ಹೆಚ್ಚು ಸ್ವಚ್ಛ ಹಾಗೂ ಸ್ಮಾರ್ಟ್ ಇಂಧನ ಪರಿಹಾರಗಳನ್ನು ಇನ್ನಷ್ಟು ಹತ್ತಿರಕ್ಕೆ ತರುವ ಪ್ರಯತ್ನವನ್ನು ಕಂಪನಿ ಮುಂದುವರಿಸಿದೆ.

ಬೆಳಗಾವಿ ಕರ್ನಾಟಕದ ಪ್ರಮುಖ ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರವಾಗಿದ್ದು, ಇಲ್ಲಿ ವಸತಿ ಸಮುದಾಯಗಳು, ವ್ಯಾಪಾರಗಳು, ವಾಣಿಜ್ಯ ಸಂಸ್ಥೆಗಳು ಮತ್ತು ಕೈಗಾರಿಕೆಗಳು ಬೆಳೆಯುತ್ತಿವೆ. ವಿಶ್ವಾಸಾರ್ಹ ವಿದ್ಯುತ್‌ ಬ್ಯಾಕಪ್ ಮತ್ತು ಸಮರ್ಥ ಇಂಧನ ನಿರ್ವಹಣೆಯ ಅಗತ್ಯ ಹೆಚ್ಚುತ್ತಿರುವುದರಿಂದ, ಸುಧಾರಿತ ಇಂಧನ ಸಂಗ್ರಹಣಾ ಪರಿಹಾರಗಳಿಗೆ ಈ ಪ್ರದೇಶ ಪ್ರಮುಖ ಮಾರುಕಟ್ಟೆಯಾಗಿದೆ.

ಹೊಸ GridShift ಶೋರೂಮ್‌ನಲ್ಲಿ ಗ್ರಾಹಕರು ಮನೆಗಳು, ಕಚೇರಿಗಳು, ವಾಣಿಜ್ಯ ಸಂಸ್ಥೆಗಳು ಹಾಗೂ ಕೈಗಾರಿಕಾ ಅಗತ್ಯಗಳು ಸೇರಿದಂತೆ ವಿವಿಧ ಬಳಕೆಗಳಿಗಾಗಿ ವಿನ್ಯಾಸಗೊಳಿಸಲಾದ PuREPower៧ ವ್ಯವಸ್ಥೆಗಳ ಶ್ರೇಣಿಯನ್ನು ವೀಕ್ಷಿಸಬಹುದು. ವಿವಿಧ ಇಂಧನ ಸಂಗ್ರಹಣಾ ಸಾಮರ್ಥ್ಯಗಳನ್ನು ಅರ್ಥಮಾಡಿಕೊಂಡು, ತಮ್ಮ ನಿರ್ದಿಷ್ಟ ವಿದ್ಯುತ್ ಅಗತ್ಯಗಳಿಗೆ ಸೂಕ್ತವಾದ ಪರಿಹಾರಗಳನ್ನು ಗುರುತಿಸಲು ಈ ಶೋರೂಮ್ ಗ್ರಾಹಕರಿಗೆ ಅವಕಾಶ ಒದಗಿಸುತ್ತದೆ.

PuREPowerನ ಪರಿಹಾರಗಳು ವಿಶ್ವಾಸಾರ್ಹ ಬ್ಯಾಕಪ್ ವಿದ್ಯುತ್ ಒದಗಿಸುವುದರ ಜೊತೆಗೆ, ಡೀಸೆಲ್ ಜನರೇಟರ್‌ಗಳು ಮತ್ತು ಇನ್ವರ್ಟ‌್ರಗಳಂತಹ ಸಾಂಪ್ರದಾಯಿಕ ಬ್ಯಾಕಪ್ ಆಯ್ಕೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಗ್ರಾಹಕರಿಗೆ ನೆರವಾಗುವಂತೆ ವಿನ್ಯಾಸಗೊಂಡಿವೆ. ಹೆಚ್ಚು ಸ್ವಚ್ಛ, ಕಡಿಮೆ ಶಬ್ದದ ಮತ್ತು ಸ್ಮಾರ್ಟ್ ಇಂಧನ ಸಂಗ್ರಹಣೆಗೆ ಒತ್ತು ನೀಡಿರುವ ಈ ಉತ್ಪನ್ನಗಳು, ನಿರಂತರ ವಿದ್ಯುತ್ ಪೂರೈಕೆ ಮತ್ತು ಹೆಚ್ಚಿನ ಇಂಧನ ಸ್ವಾವಲಂಬನೆ ಬಯಸುವ ಗ್ರಾಹಕರಿಗೆ ಬೆಂಬಲವಾಗಿ ನಿಲ್ಲುತ್ತವೆ.

ಹೊಸದಾಗಿ ಉದ್ಘಾಟನೆಗೊಂಡ ಈ ಶೋರೂಮ್ ಕೇವಲ ಮಾರಾಟ ಮಳಿಗೆಯಲ್ಲ. ವ್ಯಕ್ತಿಗಳು, ಉದ್ಯಮಗಳು ಮತ್ತು ಕೈಗಾರಿಕೆಗಳು ಆಧುನಿಕ ಇಂಧನ ಸಂಗ್ರಹಣಾ ತಂತ್ರಜ್ಞಾನಗಳ ಬಗ್ಗೆ ತಿಳಿದುಕೊಂಡು, ತಮ್ಮ ನಿರ್ದಿಷ್ಟ ವಿದ್ಯುತ್ ಅಗತ್ಯಗಳಿಗೆ ಅನುಗುಣವಾದ ಪರಿಹಾರಗಳನ್ನು ಕಂಡುಕೊಳ್ಳಬಹುದಾದ ಗ್ರಾಹಕ-ಕೇಂದ್ರಿತ ಕೇಂದ್ರವಾಗಿ ಇದು ಕಾರ್ಯನಿರ್ವಹಿಸಲಿದೆ.

GridShift – DSPPKA0712 PuREPowerನ ಅಧಿಕೃತ ವಿತರಕರಾಗಿ ನೇಮಕ ಮಾಡಿರುವುದು ಕರ್ನಾಟಕದಲ್ಲಿ ಕಂಪನಿಯ ವಿತರಣಾ ಜಾಲವನ್ನು ಇನ್ನಷ್ಟು ಬಲಪಡಿಸಿದ್ದು, ಸುಧಾರಿತ ಇಂಧನ ಸಂಗ್ರಹಣಾ ಪರಿಹಾರಗಳನ್ನು ಹೆಚ್ಚಿನ ಮಾರುಕಟ್ಟೆಗಳಿಗೆ ತಲುಪಿಸುವ ಕಂಪನಿಯ ಗುರಿಗೆ ಪೂರಕವಾಗಿದೆ.
ಉದ್ಯಮ, ವಾಣಿಜ್ಯ ಮತ್ತು ವಸತಿ ಬೆಳವಣಿಗೆಯ ಪ್ರಮುಖ ಪ್ರಾದೇಶಿಕ ಕೇಂದ್ರವಾಗಿ ಬೆಳಗಾವಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ, ನವೀನ ಮತ್ತು ಸುಸ್ಥಿರ ವಿದ್ಯುತ್ ಪರಿಹಾರಗಳ ಮೂಲಕ ಈ ಪ್ರದೇಶದ ಬದಲಾಗುತ್ತಿರುವ ಇಂಧನ ಅಗತ್ಯಗಳನ್ನು ಪೂರೈಸುವ ಕಂಪನಿಯ ನಿರಂತರ ಬದ್ಧತೆಯನ್ನು ಹೊಸ PuREPower ಶೋರೂಮ್ ಪ್ರತಿಬಿಂಬಿಸುತ್ತದೆ.

ವಿಸ್ತರಿಸುತ್ತಿರುವ ತನ್ನ ವಿತರಕ ಮತ್ತು ಶೋರೂಮ್ ಜಾಲದ ಮೂಲಕ, ಮನೆಗಳು, ಉದ್ಯಮಗಳು ಮತ್ತು ಕೈಗಾರಿಕೆಗಳು ವಿಶ್ವಾಸಾರ್ಹ ಇಂಧನ ಸಂಗ್ರಹಣಾ ಪರಿಹಾರಗಳನ್ನು ಪಡೆದು ಹೆಚ್ಚಿನ ಇಂಧನ ಸ್ವಾವಲಂಬನೆಯತ್ತ ಸಾಗುವ ಭವಿಷ್ಯಕ್ಕಾಗಿ PuREPower ಶ್ರಮಿಸುತ್ತಿದೆ.

*PURE ಕುರಿತು*
ಐಐಟಿ ಹೈದರಾಬಾದ್‌ನ ITICನಲ್ಲಿ ಇನ್‌ಕ್ಯುಬೇಟ್ ಆಗಿರುವ PURE, ಬ್ಯಾಟರಿ ತಂತ್ರಜ್ಞಾನದಲ್ಲಿ ಮುಂಚೂಣಿ ಸಂಸ್ಥೆಯಾಗಿದ್ದು, ಗ್ರಾಹಕರಿಗೆ ಸುಗಮ ಅನುಭವ ನೀಡುವ ನವೀನ ಇಂಧನ ಸಂಗ್ರಹಣಾ ಮತ್ತು ಎಲೆಕ್ನಿಕ್ ಮೊಬಿಲಿಟಿ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುತ್ತಿದೆ. 100ಕ್ಕೂ ಹೆಚ್ಚು ಐಪಿಗಳನ್ನು ಒಳಗೊಂಡಿರುವ ನಮ್ಮ ಸದೃಢ ಪೋರ್ಟ್‌ಫೋಲಿಯೊ, ತಂತ್ರಜ್ಞಾನದ ಗಡಿಗಳನ್ನು ವಿಸ್ತರಿಸುವ ಹಾಗೂ ಅಸಾಧಾರಣ ಕಾರ್ಯಕ್ಷಮತೆ ನೀಡುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ. 80ಕ್ಕೂ ಹೆಚ್ಚು ಡೀಲರ್‌ಶಿಪ್‌ಗಳು ಮತ್ತು 80,000ಕ್ಕೂ ಹೆಚ್ಚು ಗ್ರಾಹಕರ ಸಮುದಾಯದೊಂದಿಗೆ ಭಾರತದಾದ್ಯಂತ ಬಲವಾದ ಅಸ್ತಿತ್ವ ಹೊಂದಿರುವ PURE, ಇಂಧನ ಮತ್ತು ಮೊಬಿಲಿಟಿ ಕ್ರಾಂತಿಯ ಮುಂಚೂಣಿಯಲ್ಲಿದೆ.
.