ಬೆಳಗಾವಿ : ಜಿಲ್ಲೆಯ ಅಥಣಿ ತಾಲೂಕಿನ ಕಟಗೇರಿ ಸಮೀಪದ ಅಥಣಿ – ಸಾವಳಗಿ ಮುಖ್ಯ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಸಂಭವಿಸಿದೆ.

ಬಸಪ್ಪ ರಾಮಪ್ಪ ಬಾಡಗೆ (55) ಮೃತಪಟ್ಟ ವ್ಯಕ್ತಿ. ಎಕ್ಸಲ್ ವಾಹನದ ಮೇಲೆ ವೇಗವಾಗಿ ಬಂದು ಸ್ಕಿಡ್ ಆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ.‌ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.