Select Page

Advertisement

ಅಪ್ರಾಪ್ತ ಬಾಲಕಿ ಅಪಹರಿಸಿ ಅತ್ಯಾಚಾರ ; ಮೂವರ ಬಂಧನ

ಅಪ್ರಾಪ್ತ ಬಾಲಕಿ ಅಪಹರಿಸಿ ಅತ್ಯಾಚಾರ ; ಮೂವರ ಬಂಧನ

ಅಥಣಿ: ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವದಾಗಿ ಪುಸಲಾಯಿಸಿ ಅಪಹರಣ ಮಾಡಿ ಬೆಂಗಳೂರಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ ಮುಸ್ಲಿಂ ಯುವಕ ಸೇರಿ ಆತನಿಗೆ ಸಹಕಾರ ನೀಡಿದ್ದ ಒಬ್ಬರನ್ನು ಅಥಣಿ ಪೊಲೀಸ್‌ರು ಬಂಧಿಸಿರುವ ಘಟನೆ ನಡೆದಿದೆ. 

ಅಥಣಿ ಪಟ್ಟಣದಿಂದ ಕಳೆದ ಒಂದು ವಾರದ ಹಿಂದೆ ಅಪಹರಣ ಮಾಡಿದ್ದ ಅನ್ಯಕೋಮಿನ ಮೂಡಲಗಿ ತಾಲೂಕಿನ ಧರ್ಮಟ್ಟಿ ಗ್ರಾಮದ ಸಧ್ಯ  ಅಥಣಿ ತಾಲೂಕಿನ ಚಿಕ್ಕಟ್ಟಿ ಗ್ರಾಮದಲ್ಲಿ ವಾಸವಾಗಿರುವ  ಇಕ್ಬಾಲ ಅಮೀನಸಾಬ ಶೇಖ (೨೧) ಬಂಧಿತ ಆರೋಪಿ.

ಇತನಿಗೆ ಸಹಾಯ ಮಾಡಿದ ಚಿಕ್ಕಟ್ಟಿ ಗ್ರಾಮದ  ಶ್ರೀಧರ ಪತ್ತಾರ(26), ಅಥಣಿಯ ಸಿದ್ಧಾರ್ಥ ನಗರದ  ರೋಹಿತ ಸಂತೋಷ ಖದ್ರಿ(19)  ಸೇರಿ  ಒಟ್ಟು ಮೂರು ಜನರನ್ನು ಬಂಧಿಸಲಾಗಿದೆ. ಅಲ್ಲದೆ ಅಪ್ರಾಪ್ತ ಬಾಲಕಿಯನ್ನು ರಕ್ಷಿಸಿ ಪೊಷಕರಿಗೆ ಒಪ್ಪಿಸಲಾಗಿದೆ.

ಮೂಲಗಳ ಪ್ರಕಾರ ಮತಾಂತರಕ್ಕೆ ಯತ್ನ ಮಾಡಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಆದರೆ ಪೊಲೀಸ್ ಮಾಹಿತಿ ಪ್ರಕಾರ ಯಾವುದೇ ಮತಾಂತರಕ್ಕೆ ಯತ್ನ ನಡೆದಿಲ್ಲ ಎಂದು ತಿಳಿದು ಬಂದಿದೆ. ಘಟನೆ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ವಿವರ : ಕಳೆದ ಜನವರಿ 10 ರಂದು  ಅಥಣಿ ಪಟ್ಟಣದ ಶಿವಯೋಗಿ ನಗರದಿಂದ  ಸ್ವೀಪ್ಟ ವಾಹನದಲ್ಲಿ   ಅಪ್ರಾಪ್ತ ಬಾಲಕಿಯನ್ನು ಪ್ರೀತಿ ಮಾಡುವದಾಗಿ ಮತ್ತು ಮದುವೆ ಅಗುವದಾಗಿ ಹೇಳಿ ಒತ್ತಾಯ ಪೂರ್ವಕವಾಗಿ ಅಪಹರಣ ಮಾಡಿದ ಬಗ್ಗೆ  ಬಾಲಕಿಯ ತಾಯಿ  ಅಥಣಿ ಪೊಲೀಸ್ ಠಾಣೆಯಲ್ಲಿ ದೂರು  ದಾಖಲಿಸಿದರು.

ವಿಶೇಷ ತನಿಖಾ ತಂಡವನ್ನು ರಚನೆ ಮಾಡಿದ್ದ ಅಥಣಿ ಪೊಲೀಸ್‌ರು ಜ. 15 ರಂದು  ಬಾಲಕಿ ಬೆಂಗಳೂರಿನಲ್ಲಿ ಇದ್ದ ಬಗ್ಗೆ ಪತ್ತೆ ಹಚ್ಚಿ ಅವಳನ್ನು ಅಲ್ಲಿಂದ ರಕ್ಷಣೆ ಮಾಡಿ ಅಥಣಿಗೆ ಕರೆ ತಂದು ಅವಳ ಹೇಳಿಕೆ ಆಧಾರದ ಮೇಲೆ ಮುಸ್ಲಿಂ  ಸಮುದಾಯದ ಇಕ್ಬಾಲ್ ಶೇಖ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದ್ದು.

ಇತನಿಗೆ ಸಹಕಾರ ನೀಡಿದ್ದ ರೋಹಿತ ಖದ್ರೆ, ಶ್ರೀಧರ್  ಪತ್ತಾರ ಎನ್ನುವ ಇಬ್ಬರು ಸಹಚರರನ್ನು ಬಂಧನ ಮಾಡಲಾಗಿದೆ. ಮೂವರು ಅರೋಪಿಗಳ ವಿರುದ್ದ ಅಪಹರಣ, ಪೋಸ್ಕೋ ಪ್ರಕರಣಗಳ ಅಡಿಯಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಘಟನೆ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!