ಭೋವಿ ವಡ್ಡರ ಅಭಿವೃದ್ಧಿ ನಿಗಮದಿಂದ ಮುಖಂಡರ ಸಭೆ
ಬೆಳಗಾವಿ : ಕರ್ನಾಟಕ ಭೋವಿ ವಡ್ಡರ ಅಭಿವೃದ್ಧಿ ನಿಗಮದಿಂದ ಭೋವಿ ವಡ್ಡರ ಮುಖಂಡರ ಸಮಾಲೋಚನಾ ಸಭೆ ದಿ.೧೦ರಂದು ೧೧ಗಂಟಗೆ ಬೆಳಗಾವಿಯ ಸಂಕಮ್ ಹೊಟೇಲ್‌ನ ಸಭಾ ಭವನದಲ್ಲಿ ಜರುಗಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭೋವಿ ವಡ್ಡರ ಅಭಿವೃದ್ಧ ನಿಗಮದ ಅಧ್ಯಕ್ಷ ಎಮ್ ರಾಮಪ್ಪ ವಹಿಸಲಿದ್ದಾರೆ. ಸಿದ್ಧರಾಮೇಶ್ವರ ಮಹಾಸ್ವಾಮಿಗಳು ಮುಖ್ಯಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಸಚಿವರಾದ ಶಿವರಾಜ ತಂಗಡಿ, ಎಚ್ ಸಿ ಮಹಾದೇವಪ್ಪ, ಭೋವಿ ವಡ್ಡರ ಸಮಾಜದ ಶಾಸಕರು, ಮಾಜಿ ಶಾಸಕರು, ಮಾಜದ ಮುಖಂಡರು ಭಾಗವಹಿಸಲಿದ್ದಾರೆ.
ಭೋವಿ ವಡ್ಡರ ಸಮಾಜ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮಾಜಿ ಜಿಪಂ ಸದಸ್ಯ ರಾಜೇಂದ್ರ ಪವಾರ(ವಡ್ಡರ) ಪ್ರಕಟನೆಯಲ್ಲಿ ತಿಳಿಸಿದ್ದಾರೆ.


