ಚಿಕ್ಕೋಡಿ : ಬಂಬಲವಾಡ ಗ್ರಾಮದ 8 ಯುವಕರು ಭಾರತೀಯ ಸೇನೆಗೆ ಆಯ್ಕೆ
ಚಿಕ್ಕೋಡಿ : ಒಂದೇ ಗ್ರಾಮದ ಎಂಟು ಜನ ಯುವಕರು ಭಾರತೀಯ ಸೇನೆಯ ಅಗ್ನಿವೀರರಾಗಿ ಆಯ್ಕೆಯಾಗುವ ಮೂಲಕ ಗ್ರಾಮದ ಕೀರ್ತಿ ಹೆಚ್ಚಿಸಿದ್ದಾರೆ.
ಚಿಕ್ಕೋಡಿ ತಾಲೂಕಿನ ಬಂಬಲವಾಡ ಗ್ರಾಮದ 8 ಜನ ಯುವಕರು ಭಾರತೀಯ ಸೇನೆಯ ಅಗ್ನಿಪಥ ಯೋಜನೆ ಭಾಗವಾದ ಅಗ್ನಿವೀರರಾಗಿ ಆಯ್ಕೆಯಾಗಿದ್ದಾರೆ.
ದರ್ಶನ ವಾಳಕೆ, ರೋಹಿತ್ ಭಜಂತ್ರಿ, ವಿನೋದ ಚಂಡಕಿ, ಅಭಿಷೇಕ ಬಡಿಗೇರ, ವಿನಾಯಕ ಬೆಳಕೂಡೆ, ಪ್ರಜ್ವಲ್ ಮರೆವ್ವಗೊಳ, ಅಕ್ಷಯ ದಿಗ್ಗೇವಾಡಿ, ರಮೇಶ ಮೂಡಲಗಿ ಆಯ್ಕೆಯಾಗಿದ್ದಾರೆ.
ಯುವಕರ ಸಾಧನೆಗೆ ಗ್ರಾಮದ ಜನ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇನ್ನೂ ಆಯ್ಕೆಯಾದವರಿಗೆ ಸನ್ಮಾನಿಸಲಾಗಿದೆ.

