Select Page

Advertisement

ಬೆಳಗಾವಿ ಪೊಲೀಸನಿಂದ ಹ್ಯೇಯ ಕೃತ್ಯ : ಪತ್ನಿಯನ್ನೇ ಕೊಂದ ಪಾಪಿ..!

ಬೆಳಗಾವಿ ಪೊಲೀಸನಿಂದ ಹ್ಯೇಯ ಕೃತ್ಯ : ಪತ್ನಿಯನ್ನೇ ಕೊಂದ ಪಾಪಿ..!

ಬೆಳಗಾವಿ :ಪ್ರೀತಿಸಿ ಮದುವೆಯಾಗಿದ್ದಾಕೆಯ ಜೊತೆಗೆ ಜೀವನ ನಡೆಸಬೇಕಿದ್ದ ಪೊಲೀಸಪ್ಪ ಕೊಲೆ ಮಾಡಿದ ಹೀನ ಘಟ‌ನೆ ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ರಾಮಸೈಟ್ ದಲ್ಲಿ ನಡೆದಿದೆ.

ಕಾಶಮ್ಮ ನೆಲ್ಲಿಕಟ್ಟಿ ಗಂಡನಿಂದ ಕೊಲೆಯಾದ ದುರ್ದೈವಿ. ಪೊಲೀಸ್ ಪೇದೆಯಾಗಿರುವ ಆಕೆಯ ಗಂಡ ಸಂತೋಷ್ ಕಾಂಬಳೆ ಕೊಲೆ ಮಾಡಿದ್ದಾನೆ. ಕಳೆದ 13ವರ್ಷದ ಹಿಂದೆ ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು.

ಮೃತಪಟ್ಟ ಮಹಿಳೆ ಕಾಶಮ್ಮ ಬಸ್ ಕಂಡಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹೆಂಡತಿ ಮೇಲೆ ಸಂಶಯ ಪಟ್ಟು ಪತಿ ಕಿರುಕುಳ ನೀಡುತ್ತಿದ್ದ. ಪತ್ನಿಗೆ ಟಾರ್ಚರ್ ನೀಡುವುದು ದೈಹಿಕ ಹಲ್ಲೆ ಮಾಡುತ್ತಿದ್ದ ಸಂತೋಷ್ ನ ಕಾಟಕ್ಕೆ ಬೇಸತ್ತು ಗಂಡನ ಸಹವಾಸ ಬಿಟ್ಟು ಕಾಶಮ್ಮ ತವರು ಸೇರಿದ್ದಳು.

ಬಳಿಕ ಸವದತ್ತಿ ಡಿಪೋಗೆ ವರ್ಗಾವಣೆ ಮಾಡಿಸಿಕೊಂಡು ಬಂದಿದ್ದಳು. ಇದಾದ ಬಳಿಕ ವಿವಾಹ ವಿಚ್ಛೇದನಕ್ಕೆ ಬೈಲಹೊಂಗಲ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಿದರು.
ತವರು ಮನೆಯಲ್ಲೂ ಇರದೇ ಸವದತ್ತಿ ಪಟ್ಟಣದಲ್ಲಿ ಬಾಡಿಗೆ ಮನೆ‌ ಮಾಡಿಕೊಂಡಿದ್ದ ಕಾಶಮ್ಮ ಏಪ್ರಿಲ್ 5, 2025ರಂದು ನ್ಯಾಯಾಲಯದಿಂದ ವಿಚ್ಚೇದನ ಕೂಡ ಪಡೆದಿದ್ದ ಕಾಶಮ್ಮ.

ಇದಾದ ಬಳಿಕವೂ ಹೆಂಡತಿಗೆ ಕರೆ ಮಾಡಿ ಬೈಯ್ಯವುದು ನಿಂದಿಸುತ್ತಿದ್ದ ಸಂತೋಷ ಅಕ್ಟೋಬರ್ 13ರಂದು ಸಂಜೆ ಎಂಟು ಗಂಟೆಗೆ ಕಾಶಮ್ಮನ ಬಳಿ ಹೋಗಿ ಗಲಾಟೆ ಮಾಡಿದ್ದಾನೆ. ಪತ್ನಿಯ ಕತ್ತು ಕೊಯ್ದು ಹೊಟ್ಟೆಗೆ ಇರಿದು ಮೂರು ಬಾರಿ ಕೊಚ್ಚಿ ಕೊಲೆ ಮಾಡಿ ಬಳಿಕ ಅಲ್ಲಿಂದ ಎಸ್ಕೇಪ್ ಆಗಿದ್ದ.

ಮೂರು ದಿನದ ಬಳಿಕ ದುರ್ವಾಸನೆ ಬಂದು ಪೊಲೀಸರಿಗೆ ಸ್ಥಳೀಯರಿಂದ ಮಾಹಿತಿ ನೀಡಿದ್ದಾರೆ. ಕೊಲೆ ಕೇಸ್ ದಾಖಲಿಸಿಕೊಂಡು ಸವದತ್ತಿ ಪೊಲೀಸರ ತನಿಖೆ ನಡೆಸಿದ್ದಾರೆ. ಪರಾರಿಯಾದ ಆರೋಪಿ ಸಂತೋಷ ಗಾಗಿ ಪೊಲೀಸರ ಹುಡುಕಾಟ ನಡೆಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!