Select Page

ರಾಜ್ಯ ಸರಕಾರಿ ನೌಕರರ ಬಹುದಿನಗಳ ಕನಸು ನನಸು : ಅವಿನಾಶ ಹೊಳೆಪ್ಪಗೋಳ

ರಾಜ್ಯ ಸರಕಾರಿ ನೌಕರರ ಬಹುದಿನಗಳ ಕನಸು ನನಸು : ಅವಿನಾಶ ಹೊಳೆಪ್ಪಗೋಳ

ಹುಕ್ಕೇರಿ: ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್ ಷಡಾಕ್ಷರಿ ಅವರ ಅವಿರತ ಪ್ರಯತ್ನದಿಂದ ಸರಕಾರಿ ನೌಕರರ ಬಹುದಿನಗಳ ಬೇಡಿಕೆಯಾಗಿದ್ದ ನಗದುರಹಿತ ಆರೋಗ್ಯ ಸೇವೆ ಒದಗಿಸುವ ಆರೋಗ್ಯ ಸಂಜೀವಿನಿ ಯೋಜನೆ ಇದೇ ಅಕ್ಟೋಬರ 1 ರಂದು ಜಾರಿಗೆ ತರಲು ಸರಕಾರ ಆದೇಶ ನೀಡಿದ್ದಕ್ಕೆ ಹುಕ್ಕೇರಿ ತಾಲೂಕಾ ನೌಕರರ ಸಂಘದ ಅಧ್ಯಕ್ಷ ಅವಿನಾಶ ಹೊಳೆಪ್ಪಗೋಳ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಸರಕಾರಿ ನೌಕರರ ಈ ಕನಸ್ಸನ್ನ ನನಸು ಮಾಡಿದ ರಾಜ್ಯಾಧ್ಯಕ್ಷ ಸಿ ಎಸ್ ಷಡಾಕ್ಷರಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ ಅವರಿಗೆ ಎಲ್ಲ ಸರಕಾರಿ ನೌಕರರ ಪರವಾಗಿ ಹೃದಯಪೂರ್ವಕ ಧನ್ಯವಾದಗಳನ್ನ ಸಲ್ಲಿಸುವದಾಗಿ ಅವಿನಾಶ ಹೊಳೆಪ್ಪಗೋಳ ತಿಳಿಸಿದ್ದಾರೆ.

ಪ್ರಮುಖವಾಗಿ ರಾಜ್ಯಾಧ್ಯಕ್ಷ ಸಿ ಎಸ್ ಷಡಕ್ಷರಿ ಹಾಗೂ ರಾಜ್ಯ ಸಂಘದ ಪದಾದಿಕಾರಿಗಳ ಪ್ರಯತ್ನದಿಂದ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 5.25 ಲಕ್ಷ ಸರ್ಕಾರಿ ನೌಕರರು ಹಾಗೂ 25 ಲಕ್ಷ ಕುಟುಂಬ ಸದಸ್ಯರು ಈ ಯೋಜನೆಯ ಲಾಭ ಪಡೆಯುವಂತಾಗಿದೆ.

ಪತಿ-ಪತ್ನಿ ಇಬ್ಬರೂ ಸರ್ಕಾರಿ ನೌಕರರಾಗಿದ್ದಲ್ಲಿ ಒಬ್ಬರು ಮಾತ್ರ ವೇತನದಲ್ಲಿ ವಂತಿಕೆಯನ್ನು ನೀಡುವುದು. ರಾಜ್ಯ ಸರ್ಕಾರದ ಅಧಿಕಾರಿ/ನೌಕರರ ತಂದೆ-ತಾಯಿ ಪಿಂಚಣಿದಾರರಾಗಿದ್ದಲ್ಲಿ ಅವರ ಮಾಸಿಕ ಆದಾಯ ಮಿತಿಯನ್ನು ರೂ. 17,000 ಗಳಿಂದ ರೂ. 27,000 ಸಾವಿರಗಳಿಗೆ ಹೆಚ್ಚಳ ಮಾಡಲಾಗಿದೆ. ವಿವಾಹಿತ ಮಹಿಳಾ ನೌಕರರ ತಂದೆ-ತಾಯಿಯೂ ಸಹ ಈ ಯೋಜನೆಯ ವ್ಯಾಪ್ತಿಗೆ ಒಳಪಡಲಿದ್ದಾರೆ. ಮಾಸಿಕ ವಂತಿಕೆಯನ್ನು ನೀಡಲು ಇಚ್ಛಿಸದೇ ಇರುವ

ನೌಕರರು ಲಿಖಿತವಾಗಿ ದಿನಾಂಕ: 18-10-2025 ರೊಳಿಗೆ ಸಂಬಂಧಿಸಿದ ಡಿ.ಡಿ.ಓ.ಗಳಿಗೆ ನೀಡಬೇಕು ಈ ಯೋಜನೆಯ ಸೌಲಭ್ಯ ಪಡೆಯಲು ರಾಜ್ಯ ಸರ್ಕಾರದ ಅಧಿಕಾರಿ, ನೌಕರರು ಪ್ರತಿ ತಿಂಗಳು ಸರ್ಕಾರ ನಿರ್ದಿಷ್ಟಪಡಿಸಿರುವ ವಂತಿಕೆಯನ್ನು ಅಕ್ಟೋಬರ್-2025ನೇ ಮಾಹೆಯಿಂದ ನೀಡಬೇಕು.ಈ ಯೋಜನೆಗೆ ರಾಜ್ಯ ಸರ್ಕಾರದ ಎಲ್ಲಾ ಅಧಿಕಾರ ನೌಕರರು HRMS-1ರಲ್ಲಿ ನೋಂದಣಿ ಮಾಡಿಕೊಳ್ಳಲು ಕ್ರಮವಹಿಸುವಂತೆ ಅವಿನಾಶ ಹೊಳೆಪ್ಪಗೋಳ ಹುಕ್ಕೇರಿ ತಾಲೂಕಿನ ಸರಕಾರಿ ನೌಕರರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!