Select Page

Advertisement

ಮಂಗಳವಾರ ಶೇಗುಣಸಿ ಮಠದಲ್ಲಿ ಶಿವಾನುಭವ ಕಾರ್ಯಕ್ರಮ

ಮಂಗಳವಾರ ಶೇಗುಣಸಿ ಮಠದಲ್ಲಿ ಶಿವಾನುಭವ ಕಾರ್ಯಕ್ರಮ

ಅಥಣಿ : ತಾಲೂಕಿನ‌ ಶೇಗುಣಸಿ ಗ್ರಾಮದ  ವಿರಕ್ತಮಠದಲ್ಲಿ ಬರುವ ಮಂಗಳವಾರ 100 ನೆಯ  ಭಕ್ತಿ ಬೆಳಗು ಶಿವಾನುಭವ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಪೂಜ್ಯ ಡಾ. ಮಹಾಂತ ಮಹಾಸ್ವಾಮಿಜಿ ಮಾಹಿತಿ ನೀಡಿದರು.

ಈ ಕುರಿತು ಭಾನುವಾರ ಮಾದ್ಯಮ ಪ್ರಕಟಣೆ ಹೊರಡಿಸಿರುವ ಇವರು, ಡಿಸೆಂಬರ್ 26 ರ ಮಂಗಳವಾರ ಸಂಜೆ 6 ಕ್ಕೆ. ಶೇಗುಣಸಿ ವಿರಕ್ತ ಮಠದಲ್ಲಿ ಶಿವಾನುಭವ ಕಾರ್ಯಕ್ರಮ ನಡೆಯಲಿದೆ‌. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಿರಕ್ತ ಮಠದ ಮು.ನಿ.ಪ್ರ ಶಂಕರ ಸ್ವಾಮೀಜಿ, ಬೆಳಗಾವಿ ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಹಾಗೂ ಅಥಣಿ ಗಚ್ಚಿನಮಠದ ಶಿವಬಸವ ಸ್ವಾಮೀಜಿ ವಹಿಸಲಿದ್ದಾರೆ.

ಶೇಗುಣಸಿ ವಿರಕ್ತ ಮಠದ ಪೂಜ್ಯ ಡಾ. ಮಹಾಂತ ಶ್ರೀಗಳ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಂದಿಗುಂದ ಶಿವಾನಂದ ಸ್ವಾಮೀಜಿ, ನದಿ ಇಂಗಳಗಾವಿಯ ಸಿದ್ದಲಿಂಗ ಸ್ವಾಮೀಜಿ, ಕಲ್ಮೇಶ್ವರ ಆಶ್ರಮದ ಹಣುಮಂತಪ್ಪ ಮಹಾರಾಜರು, ಹಳಿಂಗಿಳಿ ಶಿವಾನಂದ ಮಹಾಸ್ವಾಮಿಜಿ, ಕಮತೇನಟ್ಟಿಯ ಗುರುದೇವ ದೇವರು, ಅಥಣಿ ಶೆಟ್ಟರ ಮಠದ ಮರುಳಸಿದ್ದ ಸ್ವಾಮೀಜಿ, ತೆಲಸಂಗ ಗ್ರಾಮದ ವಿರೇಶ್ವರ ದೇವರು, ಜನವಾಡದ ಮಲ್ಲಿಕಾರ್ಜುನ ಶ್ರೀಗಳ ಉಪಸ್ಥಿತಿ ಇರಲಿದೆ ಎಂದು ತಿಳಿಸಿದ್ದಾರೆ‌.

Advertisement

Leave a reply

Your email address will not be published. Required fields are marked *

error: Content is protected !!