6G ತಂತ್ರಜ್ಞಾನದಲ್ಲಿ ಭಾರತ ಮುಂಚೂಣಿ ರಾಷ್ಟ್ರ : ಜ್ಯೋತಿರಾದಿತ್ಯ ಸಿಂಧಿಯಾ
ಬೆಂಗಳೂರು : ತಂತ್ರಜ್ಞಾನದಲ್ಲಿ ಭಾರತ ಮಂಚೂಣಿಯಲ್ಲಿದೆ.
6G ತಂತ್ರಜ್ಞಾನದಲ್ಲಿ ಜಾಗತಿಕ ನಾಯಕತ್ವ ವಹಿಸಲು ಅಗತ್ಯವಿರುವ ಎಲ್ಲಾ ಸಾಮರ್ಥ್ಯ ಮತ್ತು ಶಕ್ತಿಯನ್ನು ಹೊಂದಿದೆ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅಭಿಪ್ರಾಯಪಟ್ಟರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕಚೇರಿಯಲ್ಲಿ ಗುರುವಾರ ನಡೆದ ದೂರಸಂಪರ್ಕ ಉತ್ಕೃಷ್ಠತಾ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕೇಂದ್ರ ಸರ್ಕಾರ 6G ಮತ್ತು ಕ್ವಾಂಟಮ್ ಕಂಪ್ಯೂಟಿಂಗ್‌ನಲ್ಲಿ ಸಂಶೋಧನೆ ಹಾಗೂ ನಾವೀನ್ಯತೆಯನ್ನು ಉತ್ತೇಜಿಸಲು “ಡಿಜಿಟಲ್ ಹೆದ್ದಾರಿ” ನಿರ್ಮಾಣಕ್ಕೆ ಬದ್ಧವಾಗಿದೆ ಎಂದರು.
ವಿಟಿಯು ನಲ್ಲಿ ಟಿಸಿಒಸಿ ಸ್ಥಾಪನೆಯು ದೇಶೀಯ ನಾವೀನ್ಯತೆಯ ಮೂಲಕ ಆತ್ಮನಿರ್ಭರ ಭಾರತ ನಿರ್ಮಾಣದತ್ತ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಕೇಂದ್ರವು ಭವಿಷ್ಯದ ದೂರಸಂಪರ್ಕ ನಾಯಕರಿಗೆ ತಂತ್ರಜ್ಞಾನದ ಜ್ಞಾನ ನೀಡುವ ತಂತ್ರಜ್ಞಾನದ ದೇವಾಲಯವಿದ್ದಂತೆ. ಇದು ಜಾಗತಿಕ ಡಿಜಿಟಲ್ ಪರಿವರ್ತನೆಯಲ್ಲಿಯೂ ಭಾರತದ ನಾಯಕತ್ವವನ್ನು ಬಲಪಡಿಸುತ್ತದೆ ಎಂದರು.
ದೇಶದಲ್ಲಿ 900 ಮಿಲಿಯನ್ ಮೊಬೈಲ್ ಸಂಪರ್ಕಗಳಿರುವ ಡಿಜಿಟಲ್ ಕ್ರಾಂತಿಯ ಕುರಿತು ಅವರು ವಿವರಿಸಿದರು. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಮವಾಯಿತ 4G/5G ಪ್ರವೇಶಕ್ಕೆ ಸರ್ಕಾರದ ಬದ್ಧತೆಯನ್ನು ಹಂಚಿಕೊಂಡರು.
TCOE ಸಂಶೋಧನಾ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ದೂರಸಂಪರ್ಕ ಉದ್ಯಮದ ನಡುವೆ ಸೇತುವೆ ರಚಿಸುವ ಮೂಲಕ ಈ ಅವಶ್ಯಕ ಸಮಯದಲ್ಲಿ ಸಹಯೋಗಕ್ಕಾಗಿ ಇದು ವೇದಿಕೆಯಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಚಿವ ಶರಣ ಪ್ರಕಾಶ್ ಪಾಟೀಲ, ವಿಟಿಯು ಕುಲಸಚಿವ ಪ್ರೊ. ಬಿ. ಈ ರಂಗಸ್ವಾಮಿ, ವಿಟಿಯು ಕಾರ್ಯಕಾರಿ ಪರಿಷತ್ ಮತ್ತು ವಿದ್ಯಾವಿಧಾನ ಮಂಡಲ ಸದಸ್ಯರು, ವಿ ಟಿ ಯು ಅಧೀನ ಕಾಲೇಜ್ ಗಳ ಸಂಸ್ಥೆಯ ಮುಖ್ಯಸ್ಥರು, ಪ್ರಾಂಶುಪಾಲರು, ದೂರಸಂಪರ್ಕ ಇಲಾಖೆಯ ಹಿರಿಯ ಅಧಿಕಾರಿಗಳು, ವಿ ಟಿ ಯು ಅಧ್ಯಾಪಕರು, ಸಿಬ್ಬಂದಿ ವರ್ಗ ಮತ್ತು ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


