ಆಕಳ ಮೈ ತೊಳೆಯಲು ಹೋಗಿದ್ದ ಯುವಕ ನೀರುಪಾಲು
ಬೈಲಹೊಂಗಲ : ಆಕಳ ಮೈ ತೊಳೆಯಲು ಹೋಗಿ ಬಾಲಕನೋರ್ವ ನೀರು ಪಾಲಾದ ಘಟನೆ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ನಡೆದಿದೆ.
ಬೂದಿಹಾಳ ಗ್ರಾಮದ ಮಲಕಾಜಿ ವಿಠ್ಠಲ ಕಂಬಳಿ (15 ) ಮೃತಪಟ್ಟ ಬಾಲಕ. ಗ್ರಾಮದ ಹತ್ತಿರದಲ್ಲಿರುವ ಮಲಪ್ರಭಾ ನದಿಯಲ್ಲಿ ಆಕಳಿನ ಮೈ ತೊಳೆಯುವಾಗ ಕಾಲು ಜಾರಿ ಬಿದ್ದು ಈ ಘಟನೆ ನಡೆದಿದೆ.
ಮೃತ ಬಾಲಕನಿಗೆ ಈಜು ಬರುತ್ತಿರಲಿಲ್ಲ. ಬೈಲಹೊಂಗಲ ಅಗ್ನಿ ಶಾಮಕ ಸಿಬ್ಬಂದಿಗಳು ಮೃತ ಬಾಲಕನ ಶವ ಪತ್ತೆ ಮಾಡಿದ್ದಾರೆ. ಮೃತ ಬಾಲಕ ಬೂದಿಹಾಳ ಸರ್ಕಾರಿ ಶಾಲೆಯಲ್ಲಿ 8ನೇ ತರಗತಿ ತೇರ್ಗಡೆಯಾಗಿದ್ದನು.
ಶಾಲೆಗೆ ರಜೆ ಇದ್ದರಿಂದ ಆಕಳಿನ ಮೈ ತೊಳೆಯಲು ನದಿಗೆ ತೆರಳಿದಾಗ ಈ ಅವಘಡ ಸಂಬವಿಸಿದೆ. ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದಣ ಮನಕಲಕುವಂತಿತ್ತು.
ಸ್ಥಳಕ್ಕೆ ದೊಡವಾಡ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು.


