24 ಗಂಟೆಯಲ್ಲಿ ಕೊಲೆ ಆರೋಪಿ ಬಂಧನ ; ಎಸ್ಪಿ ಹೇಳಿದ್ದೇನು..?
ಬೆಳಗಾವಿ : ಖಾನಾಪುರ ತಾಲೂಕಿನ ಬಲೋಗಾ ಗ್ರಾಮದ ಶಿವನಗೌಡ ಪಾಟೀಲ್ (47)ನ್ನು ಭೀಕರವಾಗಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಆರೋಪಿಯನ್ನು ಕಲಬುರಗಿಯಲ್ಲಿ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್ ಹೇಳಿದರು.
ಗುರುವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.ಖಾನಾಪುರ ತಾಲೂಕಿನ ಗಾಡಿಕೊಪ್ಪ ಗ್ರಾಮದ ಬಳಿ ಮೃತನ ಶವ ಸಿಕ್ಕಿರುತ್ತೆ. ತಲೆಗೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದು ಗೊತ್ತಾಗುತ್ತೆ. ಶಿವನಗೌಡ ಪಾಟೀಲ್ ಎಂಬಾತನ ಕೊಲೆಯಾಗಿರುತ್ತದೆ.
ಘಟನೆ ನಡೆದ 24ಗಂಟೆಯಲ್ಲಿ ಆರೋಪಿ ಬಂಧನ ಮಾಡಲಾಗಿದೆ ಎಂದರು. ಕೊಲೆ ಮಾಡಿ ಆರೋಪಿ ಕಲಬುರಗಿಗೆ ಎಸ್ಕೇಪ್ ಆಗಿದ್ದ. ಕಲಬುರಗಿಯಲ್ಲಿ ನಮ್ಮ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೀಡಿ ಗ್ರಾಮದ ಬಸಪ್ಪ ಹೊಸಟ್ಟಿ ವಶಕ್ಕೆ ಪಡೆದಿದ್ದೇವೆ ಎಂದರು.
ತಾನೇ ಕೊಲೆ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಮೊನ್ನೆ ದಿನ ಅವರ ಮನೆಯಿಂದ ಕರೆದುಕೊಂಡು ಹೋಗಿ ಚೆನ್ನಾಗಿ ಕುಡಿಸಿ ಜಮೀನಿಗೆ ಕರೆದುಕೊಂಡು ಕೊಲೆ ಮಾಡಿದ್ದ ಎಂದರು.


